ಪ್ರಕಟಣೆ

ಡಿಸೆಂಬರ್ 4 ಮತ್ತು 5ಕ್ಕೆ ಕುಶಾಲನಗರದಲ್ಲಿ ಅದ್ದೂರಿ ಹನುಮ ಜಯಂತಿ ಕಾರ್ಯಕ್ರಮ

ಕುಶಾಲನಗರ, ‌ನ 23:

ಕುಶಾಲನಗರದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಾಸ್ಥಾನ ಟ್ರಸ್ಟ್ ಹಾಗೂ ಆಂಜನೇಯ ಸೇವಾ ಸಮಿತಿ ಆಶ್ರಯದಲ್ಲಿ ಡಿ.4 ಮತ್ತು 5ರಂದು ಅದ್ದೂರಿಯಾಗಿ 37ನೇ ವರ್ಷದ ಹನುಮ ಜಯಂತಿ ಆಚರಿಸಲಾಗುವುದು ಎಂದು ರಾಮಾಂಜನೇಯ ಉತ್ಸವ ಸಮಿತಿ, ದೇವಾಸ್ಥಾನ ಟ್ರಸ್ಟ್ ಕಾರ್ಯದರ್ಶಿ ನವನೀತ್ ಪಿ.ಪಿ. ತಿಳಿಸಿದರು.

ಬುಧವಾರ ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 4ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಪವನಾಮ ಹೋಮ ನಡೆಯಲಿದೆ. ಡಿ. 5ರಂದು ಸೋಮವಾರ ಬೆಳಗ್ಗೆ 7 ಗಂಟೆಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಹಾಗೂ 1 ಗಂಟೆಗೆ ಸುಮಾರು 10 ಸಾವಿರ ಮಂದಿ ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಸಂಜೆ 6 ಗಂಟೆಗೆ ಅಲಂಕೃತ ಮಂಟಪದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಮಿತಿ ಅಧ್ಯಕ್ಷ ಪ್ರಶಾಂತ್ ವಿ.ಹೆಚ್. ಮಾತನಾಡಿ, ಡಿ. 5ರಂದು ನಡೆಯುವ ಶೋಭಾಯಾತ್ರೆಯಲ್ಲಿ ಪಟ್ಟಣದ 7 ದೇವಾಲಯಗಳ ವಿದ್ಯುತ್ ಅಲಂಕೃತ ಮಂಟಪಗಳೂ ಪಾಲ್ಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈಗಾಗÀಲೇ ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಉಪಾಧ್ಯಕ್ಷ ಅನುದೀಪ್ ಕೆ.ವಿ. ಮಾತನಾಡಿ, ಶ್ರೀ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿ ಮೆರವಣಿಗೆ ಆಂಜನೇಯ ದೇವಾಲಯದಿಂದ ಬೈಚನಹಳ್ಳಿ ಮಾರಿಯಮ್ಮ ದೇವಾಲಯ ತನಕ ನಡೆಯಲಿದೆ. ಈ ವೇಳೆ ಸುಮಾರು 10-15 ಸಾವಿರ ಮಂದಿ ಸೇರುವ ನಿರೀಕ್ಷೆ ಇದ್ದು, ವಿದ್ಯುತ್ ದೀಪಾಲಂಕೃತ ಮಂಟಪಗಳ ಮೆರವಣಿಗೆ ಮಡಿಕೇರಿ ದಸರಾವನ್ನು ನೆನಪಿಸಲಿದೆ ಎಂದರು.
ಸಹ ಸಂಚಾಲಕ ಹರೀಶ್ ಎಲ್, ಸಹ ಕಾರ್ಯದರ್ಶಿ ವಿನು ಟಿ., ಖಜಾಂಚಿ ಪ್ರವೀಣ್ ಎಸ್., ಸಂಚಾಲಕ ಚಂದ್ರಶೇಖರ್ ಕೆ.ಎಸ್., ನಿರ್ದೇಶಕರಾದ ಪ್ರಸಾದ್ ವಿ.ಎನ್., ಪರಮೇಶ್ ಡಿ.ಆರ್., ಹಾಗೂ ರಘು ಡಿ.ವಿ. ಸುದ್ದಿ ಗೋಷ್ಠಿಯಲ್ಲಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!