ಕುಶಾಲನಗರ, ಮೇ 29: ಕುಶಾಲನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಸಾರಿಗೆ ಬಸ್ ಚಕ್ರಕ್ಕೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸೋಮವಾರಪೇಟೆ ಶಾಂತಳ್ಳಿ ಗ್ರಾಮದ ಸೋಮಶೇಖರ್ (45) ಮೃತರು ಎಂದು ಗುರುತಿಸಲಾಗಿದೆ. ಸೋಮವಾರಪೇಟೆ ಬಾರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವಿವಾಹಿತನಾದ ಈತ ಕಳೆದ ಒಂದು ವಾರದಿಂದ ಕುಶಾಲನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ತಂಗುತ್ತಿದ್ದ ಎನ್ನಲಾಗಿದೆ. ಗುರುವಾರ ಸಂಜೆ ನಿಲ್ದಾಣಕ್ಕೆ ಬರುತ್ತಿದ್ದ ಬಸ್ ಮುಂದೆ ಬೀಳಲು ಪ್ರಯತ್ನ ನಡೆಸಿ ವಿಫಲಗೊಂಡಿದ್ದ. ಇಂದಿರಾ ಕ್ಯಾಂಟಿನ್ ಮುಂಭಾಗ ರಾತ್ರಿ 8 ಗಂಟೆಗೆ ಮತ್ತೆ ಈತ ಬಸ್ ಕೆಳಗೆ ಹಾರಿರುವುದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿರುವುದಾಗಿ ಸಂಚಾರ ಪೊಲೀಸ್ ಠಾಣೆ ಅಧಿಕಾರಿ ಮಾಹಿತಿ ನೀಡಿದ್ದಾರೆ.
Back to top button
error: Content is protected !!