ಕುಶಾಲನಗರ, ಸೆ 10: ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಸಾಹೇಬರ ನಿವಾಸದ ಮೇಲೆ ಜಾರಿಗೊಳಿಸಲಾದ ಇ.ಡಿ. ಇಲಾಖೆಯ ದಾಳಿಯನ್ನು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಕೊಡಗು ಯುವ ಘಟಕದ ಅಧ್ಯಕ್ಷ ಚಂದನ್ ಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
ನಮ್ಮ ವಾಲ್ಮೀಕಿ ನಾಯಕ ಸಮುದಾಯದ ಅಗ್ರಗಣ್ಯ ನಾಯಕರನ್ನು ಗುರಿಯಾಗಿಸಿಕೊಂಡು ಇಂತಹ ತನಿಖಾ ಕ್ರಮಗಳನ್ನು ಕೈಗೊಳ್ಳುತ್ತಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದ ಕ್ರಮವಾಗಿದ್ದು, ಸಮಾಜದ ನಾಯಕರನ್ನು ಅಸ್ಥಿರಗೊಳಿಸುವ ಹಾಗೂ ಸಮಾಜದ ಧ್ವನಿಯನ್ನು ದುರ್ಬಲಗೊಳಿಸುವ ಹುನ್ನಾರವಾಗಿದೆ.
ಸಮಾಜದ ಹಕ್ಕು, ಗೌರವ ಮತ್ತು ನ್ಯಾಯಕ್ಕಾಗಿ ಸದಾ ಧ್ವನಿ ಎತ್ತುತ್ತಿರುವ ನಮ್ಮ ನಾಯಕರನ್ನು ಯಾವುದೇ ರೀತಿಯ ರಾಜಕೀಯ ಒತ್ತಡ ಅಥವಾ ದಾಳಿಗಳ ಮೂಲಕ ಮೌನಗೊಳಿಸಲು ಸಾಧ್ಯವಿಲ್ಲ.
ವಾಲ್ಮೀಕಿ ನಾಯಕ ಸಮಾಜವು ಸದಾ ನಮ್ಮ ನಾಯಕರ ಪರವಾಗಿ ಒಗ್ಗಟ್ಟಿನಿಂದ ನಿಲ್ಲುತ್ತದೆ ಎಂದು ಕೊಡಗು ಜಿಲ್ಲೆಯ ಶ್ರೀ ವಾಲ್ಮೀಕಿ ನಾಯಕ ಸಂಘ ಹಾಗೂ ಸಮುದಾಯದ ನಾಯಕರ ಪರವಾಗಿ ಅವರು ಪ್ರಕಟಣೆ ಹೊರಡಿಸಿದ್ದಾರೆ.
Back to top button
error: Content is protected !!