ಪ್ರಕಟಣೆ

ಹೆಚ್.ಶಿವರಾಮೇಗೌಡರ ಕರವೇ ಕೊಡಗು ಜಿಲ್ಲಾ ಗೌರವ ಅಧ್ಯಕ್ಷರಾಗಿ ನಾಗರಾಜು ಹೆಚ್ ಕಾವಲ್ ಕೊಂಡ

ಕುಶಾಲನಗರ, ಏ 01: ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕೊಡಗು ಜಿಲ್ಲಾ ಗೌರವ ಅಧ್ಯಕ್ಷರಾಗಿ ಕುಶಾಲನಗರದ ಮುಳ್ಳುಸೋಗೆ ನಿವಾಸಿ ನಾಗರಾಜು ಹೆಚ್ ಕಾವಲ್ ಕೊಂಡ ಅವರನ್ನು ನೇಮಕಗೊಳಿಸಿ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ಆದೇಶ ಹೊರಡಿಸಿದ್ದಾರೆ.

ಕನ್ನಡ ನಾಡು, ನುಡಿ, ಜಲ, ಗಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿಯನ್ನು ದ್ವೇಷಾಸೂಯೆ, ವ್ಯಕ್ತಿಗತ ಪ್ರತಿಷ್ಠೆ ಬದಿಗೊತ್ತಿ ಸಂಘದ ಗುರಿ, ಧ್ಯೇಯಕ್ಕೆ ಬದ್ದರಾಗಿ ಕಾರ್ಯನಿರ್ವಹಿಸುವಂತೆ ರಾಜ್ಯಾಧ್ಯಕ್ಷರ ಅನುಮೋದನೆಯೊಂದಿಗೆ ನೂತನ ಅಧ್ಯಕ್ಷರಿಗೆ ಆದೇಶ ಪ್ರತಿ ಹಸ್ತಾಂತರಿಸಲಾಗಿದೆ.
ಮುಂಬರುವ ಒಂದು ವರ್ಷ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಘಟನೆಯನ್ನು ಕ್ರಿಯಾಶೀಲರಾಗಿ ಮುನ್ನಡೆಸಿಕೊಂಡು ತನಗೆ ನೀಡಿದ ಜವಬ್ದಾರಿಯನ್ನು ದುರುಪಯೋಗಪಡಿಸಿಕೊಳ್ಳದೆ ಕಾರ್ಯನಿರ್ವಹಿಸುವುದಾಗಿ ನೂತನ ಗೌರವಾಧ್ಯಕ್ಷರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!