ಕುಶಾಲನಗರ, ಜ 26 : ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ 77 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.
ಕಾರ್ಗಿಲ್ ಯೋಧ ದೇವಂಗೋಡಿ ದೇವಯ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದೇಶಪ್ರೇಮ ಬೆಳೆಸಿಕೊಳ್ಳಬೇಕು.
ದೇಶದ ಗಡಿ ಕಾಯುವ ಸೈನಿಕರಿಗೆ ಸದಾ ಗೌರವ ಸಲ್ಲಿಸುವ ಜೊತೆಗೆ ಹೆತ್ತವರು ಹಾಗೂ ಶಿಕ್ಷಕರಿಗೆ ವಿಧೇಯರಾಗುವ ಮೂಲಕ ಉತ್ತಮ ಸಂಸ್ಕಾರ ಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆಕೊಟ್ಟರು.
ವಸತಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಟಿ. ಕೆ.ಸುಧೀರ್ ಮಾತನಾಡಿ, ದೇಶ ವಾಸಿಗಳು ನಾವು ಸರಿ ಇದ್ದರೆ ದೇಶ ಸರಿಯಾಗಿರುತ್ತದೆ. ದೇಶ ಅಭಿವೃದ್ದಿ ಶೀಲ ರಾಷ್ಟ್ರವಗುತ್ತದೆ.
ಈ ದೇಶದ ಭವಿಷ್ಯದ ಸತ್ಪ್ರಜೆಗಳಾದ ಇಂದಿನ ಮಕ್ಕಳು ಹಾಗೂ ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳ ಚರಿತ್ರೆಗಳನ್ನು ಓದುವ ಮೂಲಕ ಸಚ್ಚಾರಿತ್ರ್ಯ ಉಳ್ಳವರಾಗಬೇಕು ಎಂದು ಹೇಳಿದ ಸುಧೀರ್, ಇಂದು
ಹದಿಹರೆಯದ ಮಕ್ಕಳು ವ್ಯಸನಕ್ಜೆ ತುತ್ತಾಗುತ್ತಿದ್ದು ಭಾರತೀಯ ಸಂಸ್ಕಾರಗಳನ್ನು ಮರೆಯುತ್ತಿದ್ದಾರೆ ಎಂದು ವಿಷಾದಿಸಿದರು.
ಶಾಲೆಯ ಕಾರ್ಯದರ್ಶಿ ಬಿ.ಎಸ್
ನಿಂಗಪ್ಪ ಮಾತನಾಡಿ, ಜಾತ್ಯಾತೀತ ಭಾರತದಲ್ಲಿ ಜೀವಂತವಾಗಿರುವ ಜಾತಿಯ ವ್ಯವಸ್ಥೆಯಿಂದಾಗಿ ಪರಸ್ಪರ ಕೆಸರೆರಚಾಟ, ದ್ವೇಷ ಅಸೂಯೆಗಳು ತಾಂಡವವಾಡುತ್ತಿವೆ. ಇಂದಿನ ವಿದ್ಯಾರ್ಥಿಗಳು ಹಾಗು ಯುವಜನಾಂಗ ನೈಜ ಜಾತ್ಯಾತೀತ ರಾಷ್ಟ್ರ ಕಟ್ಟುವಲ್ಲಿ ಪಣ ತೊಡಗಬೇಕು ಎಂದು ಕರೆ ಕೊಟ್ಟರು.
ಶಾಲೆಯ ಪ್ರಾಂಶುಪಾಲೆ ಸತ್ಯಸುಲೋಚನಾ, ಉಪಪ್ರಾಂಶುಪಾಲ ನಾಗರಾಜು ಇದ್ದರು.
ಕಾರ್ಯಕ್ರಮದ ಬಳಿಕ ವಿದ್ಯಾರ್ಥಿ ಗಳಿಂದ ದೇಶ ಪ್ರೇಮ ಮೂಡಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿದ್ಯಾರ್ಥಿ ಕುಲದೀಪ್ ಸ್ವಾಗತಿಸಿದರು.
ಯಶಿಕಾರಾಜ್ ನಿರೂಪಿಸಿದರು.ಹಿತೇನ್ ವಂದಿಸಿದರು.
Back to top button
error: Content is protected !!