ಪ್ರಕಟಣೆ

ಬೇಸಿಗೆಯಲ್ಲಿ ಜಲಕ್ರೀಡೆ ಸಮಂಜಸವಲ್ಲ: ಕಾನೂನು ವಿದ್ಯಾರ್ಥಿ ಕುಲದೀಪ್ ಅಭಿಮತ

ಕುಶಾಲನಗರ, ಏ 19: ಹಾರಂಗಿ ಹಿನ್ನೀರಿನಲ್ಲಿ ಆರಂಭಿಸಿರುವ ಜಲಕ್ರೀಡೆ ಯಿಂದ ಇದೀಗ ಎದುರಾಗಿರುವ ಅನಾನುಕೂಲಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳು ವ್ಯಕ್ತಗೊಳ್ಳುತ್ತಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಶಾಲನಗರದ ಕರಿಯಪ್ಪ ಬಡಾವಣೆಯ ಕಾನೂನು ವಿದ್ಯಾರ್ಥಿ ಕುಲದೀಪ್ ಗೌಡ,  ಜಲಾಶಯದಲ್ಲಿ ಕ್ರೀಡಾ ಚಟುವಟಿಕೆಗಳಿಂದ ಶುದ್ಧ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದು, ತಕ್ಷಣ ರದ್ದುಗೊಳಿಸುವಂತೆ ಹಾರಂಗಿ ಗ್ರಾಮದ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವುದನ್ನು ಹಾಗೂ ಇದಕ್ಕೆ ಪರ ವಿರೋಧದ ಹೇಳಿಕೆಗಳನ್ನು ನೀಡಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಓದಿ ಗಮನಿಸಿದ್ದೇನೆ.

ಅದೇನೆ ಇರಲಿ ಹಾರಂಗಿ ಜಲಾಶಯದಲ್ಲಿ ವಿನಾಶದ ಅಂಚಿನಲ್ಲಿರುವ ಮಹಶೀರು ಮೀನುಗಳು, ಬರೇ ಮೀನು, ಮೊಸಳೆಗಳಂತಹ ಜಲಚರಗಳಿರುತ್ತವೆ. ನೀರು ಕಡಿಮೆಯಿರುವ ಜನವರಿಯಿಂದ ಮೇವರೆಗೆ ಡೀಸೆಲ್ ಬೋಟ್ ಚಾಲಿಸಿದಲ್ಲಿ ನೀರು ಕಲುಷಿತಗೊಳ್ಳುವುದು ನಿಶ್ಚಿತ. ಅದೇ ನೀರನ್ನು ಕೆಳಭಾಗದಲ್ಲಿರುವ ನಾಗರೀಕರು ಕುಡಿಯಬೇಕಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ಈ ಚಟುವಟಿಕೆಗಳನ್ನು ನಡೆಸಿದಲ್ಲಿ ಯಾವುದೇ ಅಭ್ಯಂತರವಿರುವುದಿಲ್ಲ. ಆದರೆ ಬೇಸಿಗೆಯಲ್ಲಿ ಈ ಚಟುವಟಿಕೆಗಳನ್ನು ನಿಯಂತ್ರಿಸುವುದು ಪರವಾನಿಗೆ ನೀಡದಂತಹ ಜವಾಬ್ದಾರಿಯಾಗಿದ್ದು ಈ ಬಗ್ಗೆ ಸಂಬಂಧಿಸಿದವರು ಗಮನ ಹರಿಸಲು ಅವರ ಕೋರಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!