ಸುದ್ದಿಗೋಷ್ಠಿ

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯಕ್ಕೆ (IGNOU) ಜನವರಿ 2026ರ ಅವಧಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಕುಶಾಲನಗರ, ಜ 18: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯಕ್ಕೆ ಜನವರಿ 2026 ಅವಧಿಗೆ ಪ್ರವೇಶಾತಿ ಆರಂಭಗೊಂಡಿದ್ದು, ಪದವಿ,ಸ್ನಾತಕೋತ್ತರ ಪದವಿ,ಡಿಪ್ಲೋಮೋ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಆಸಕ್ತ ವಿದ್ಯಾರ್ಥಿಗಳು ಆನ್ಲೈನ್ ಅರ್ಜಿ ಸಲ್ಲಿಸುವಂತೆ ಇಗ್ನೋವ್ ಪ್ರಾದೇಶಿಕ ಉಪ ನಿರ್ದೇಶಕಿ ಡಾ.ಹೇಮಮಾಲಿನಿ.ಹೆಚ್.ಸಿ. ತಿಳಿಸಿದ್ದಾರೆ. ಬೈಲುಕೊಪ್ಪೆಯ ಲಾಮಾ ಕ್ಯಾಂಪ್ ನ ಸೆರಾಜೆ ಮೊನಾಸ್ಟಿಕ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗೆ ವಿವರಣೆ ನೀಡಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, https://ignouadmission.samarth.edu.in ನಲ್ಲಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಪ್ರವೇಶ ಪಡೆಯಬಹುದಾಗಿದೆ.

SC/ST ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯಿದೆ.
ಬ್ಯಾಚುಲರ್ ಆಫ್ ಆರ್ಟ್ಸ್(BAM) ಬ್ಯಾಚುಲರ್ ಆಫ್ ಕಾಮರ್ಸ್(BCOMF) ಮತ್ತು ಬ್ಯಾಚುಲರ್ ಆಫ್ ಸೈನ್ಸ್(BSCM) ಕಾರ್ಯಕ್ರಮಗಳಿಗೆ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರುವ ಎಸ್ ಸಿ ಮತ್ತು ಎಸ್ ಟಿ ವಿದ್ಯಾರ್ಥಿಗಳು ಪ್ರವೇಶ ಶುಲ್ಕದಲ್ಲಿ 50% ವಿನಾಯಿತಿಯನ್ನು ಪಡೆಯಬಹುದಾಗಿದೆ.

ಪ್ರವೇಶ ಪರೀಕ್ಷೆ ಇಲ್ಲದೆ MBAಗೆ ಇಗ್ನೊ ನೇರ ಪ್ರವೇಶವನ್ನು ಒದಗಿಸುತ್ತಿದೆ ಎಂದು ಮಾಹಿತಿ ನೀಡಿದರು. https://ignouadmission.samarth.edu.in/index.php/site/programmesನಲ್ಲಿ ಕಾರ್ಯಕ್ರಮಗಳ ಪಟ್ಟಿ ಮತ್ತು ಸಂಪೂರ್ಣ ವಿವರಗಳು ಲಭ್ಯವಿದೆ .

ಹೆಚ್ಚಿನ ವಿವರಗಳಿಗಾಗಿ ಬೈಲುಕುಪ್ಪೆಯ ವಿಶೇಷ ಅಧ್ಯಯನ ಕೇಂದ್ರ 13156D ಸೆರಾಜೆ ಮೊನಾಸ್ಟಿಕ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಪಡೆದುಕೊಳ್ಳಬಹುದು ಅಥವಾ ದೂರವಾಣಿ ಸಂಖ್ಯೆ 9900480290ಗೆ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು ಅಥವಾ sjignouc@gmail.com ಗೆ ಮೇಲ್ ಸಹ ಮಾಡಬಹುದು. ಪ್ರವೇಶಾತಿ ಸಮಯದಲ್ಲಿ ಗೊಂದಲಗಳಿಗೆ Whatsapp ಸಂಖ್ಯೆ 9449337272 ಗೆ ಮೆಸೇಜ್ ಮಾಡುವ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇಗ್ನೊ ಬೆಂಗಳೂರು ಪ್ರಾದೇಶಿಕ ಕೇಂದ್ರದ ವೆಬ್ಸೈಟ್‌ನಲ್ಲಿ ಅಧ್ಯಯನ ಕೇಂದ್ರಗಳ ವಿವರಗಳು ಲಭ್ಯವಿರುತ್ತದೆ (https://rcbangalore.ignou.ac.in).
ಕನಿಷ್ಠ 18 ವಯೋಮಿತಿ, ಗರಿಷ್ಟ ವಯಸ್ಸಿನ‌ ಮಿತಿಯಿಲ್ಲ. ಸುತ್ತಮುತ್ತಲಿನ ಗ್ರಾಮ, ನಗರಗಳ ಆಸಕ್ತರು ಅರ್ಜಿ ಸಲ್ಲಿಸುವ ಮೂಲಕ ದೂರ ಶಿಕ್ಷಣದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ವಿನಂತಿಸಿಕೊಂಡರು.
ಗೋಷ್ಠಿಯಲ್ಲಿ ಸೆರಜೆ ಶಿಕ್ಷಣ ಕೇಂದ್ರದ ನಿರ್ದೇಶಕ ಗೆಶೆ ಜಂಪ ಚವಾಂಗ್, ವಿಶೇಷ ಶಿಕ್ಷಣ ಕೇಂದ್ರದ ಸಹಾಯಕ ಸಂಚಾಲಕ ನವಾಂಗ್ ಫುಂಟ್ಸೋಕ್,ವಿಶೇಷ ಅಧ್ಯಯನ ಕೇಂದ್ರದ ಕಾರ್ಯದರ್ಶಿ ಕರ್ಮ ದೋರ್ಜಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!