ಮಳೆ

ಹಕ್ಕೆಯಲ್ಲಿ ಮನೆಯ ಗೋಡೆ ಕುಸಿತ: ಪ್ರಾಣಾಪಾಯದಿಂದ ಪಾರಾದ ಮಹಿಳೆ

ಕುಶಾಲನಗರ, ಆ.2: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಕ್ಕೆ ಗ್ರಾಮದ ನಿವಾಸಿ ಮಲ್ಲಿಗೆ ಎಂಬವರ ಮನೆಯ ಗೋಡೆ ಅತಿಯಾದ ಮಳೆಯಿಂದಾಗಿ ಸಂಪೂರ್ಣವಾಗಿ ಕುಸಿದು‌ ಬಿದ್ದಿದೆ.
ಮಲ್ಲಿಗೆ ಅವರು ವಿಕಲಚೇತನರಾಗಿದ್ದು ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಒಂದು ಬದಿಯ ಗೋಡೆ ಕುಸಿತಗೊಂಡ ತಕ್ಷಣವೇ ಹೊರ ಬಂದಿದರಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಧಳಕ್ಕೆ ಕುಶಾಲನಗರ ತಾಲ್ಲೂಕು ತಹಸೀಲ್ದಾರರ ಕಿರಣ್ ಗೌರಯ್ಯ, ಕಂದಾಯ ಪರಿವೀಕ್ಷಣಾ ಅಧಿಕಾರಿ ಸಂತೋಷ್, ಗ್ರಾಮ ಅಡಳಿತ ಅಧಿಕಾರಿ ಫೀರ್ ಮಹಮ್ಮದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!