ಕುಶಾಲನಗರ, ಜ 12: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ಸುಮಾರು 104 ವರ್ಷಗಳಿಂದ ಗ್ರಾಹಕರ ಹಾಗೂ ಇಲಾಖೆಯ ನಿರಂತರ ಸೇವೆಯಲ್ಲಿ ತೊಡಗಿದ್ದು ಕರ್ನಾಟಕ ರಾಜ್ಯದ್ಯಂತ ಸುಮಾರು 30 ಸಾವಿರ ಕರ್ನಾಟಕ ಸರ್ಕಾರದಿಂದ ಪರವಾನಗಿ (ಲೈಸನ್ಸ್) ಪಡೆದ ಗುತ್ತಿಗೆದಾರರಿದ್ದು ಕೊಡಗು ಜಿಲ್ಲೆಯಲ್ಲಿ 170 ಜನ ಗುತ್ತಿಗೆ ದಾರರು ಗ್ರಾಹಕರ ಸೇವೆಯಲ್ಲಿ ತೊಡಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಮನೆ ಹಾಗೂ ವಾಣಿಜ್ಯ ಕಟ್ಟಡಗಳ ವೈರಿಂಗ್ ಕೆಲಸಗಳನ್ನು ಲೈಸನ್ಸ್ ಪಡೆದ ವಿದ್ಯುತ್ ಗುತ್ತಿಗೆದಾರರಿಗೆ ನೀಡದೆ ನೇರವಾಗಿ ಎಲೆಕ್ಟ್ರಿಷಿಯನ್ಗಳಿಗೆ ಕೆಲಸ ನೀಡುತ್ತಿದ್ದು ಕೇವಲ ಮೀಟರ್ ಪಡೆಯಲು ವಿದ್ಯುತ್ ಗುತ್ತಿಗೆದಾರರನ್ನು ಸಂಪರ್ಕಿಸಿ ವಿದ್ಯುತ್ ಸಂಪರ್ಕ ವನ್ನು ಪಡೆದುಕೊಳ್ಳುತ್ತಾರೆ. ಇದರಿಂದ ಇದನ್ನೇ ನಂಬಿ ಬದುಕುತ್ತಿರುವ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಮುಂದಿನ ದಿನಗಳಲ್ಲಿ ನಿಮ್ಮ ಮನೆ ಅಥವಾ ವಾಣಿಜ್ಯ ಮಳಿಗೆಗಳ ವೈರಿಂಗ್ ಕೆಲಸ ನೀಡುವ ಸಂದರ್ಭದಲ್ಲಿ ತಾವುಗಳು ಎಲೆಕ್ಟ್ರಿಕಲ್ ಲೈಸನ್ಸ್, ಸೂಪರ್ವೈಜರ್ ಲೈಸನ್ಸ್, ಹಾಗೂ ವೈರ್ ಮ್ಯಾನ್ ಲೈಸನ್ಸ್ ಹೊಂದಿರುವವರಿಂದಲೇ ವಿದ್ಯುತ್ ಗೆ ಸಂಬಂಧಪಟ್ಟ ಕಾಮಗಾರಿಗಳನ್ನು ಮಾಡಿಸಿಕೊಳ್ಳಬೇಕು. ಇದನ್ನು ಹೊರತುಪಡಿಸಿ. ಇಲಾಖೆಯ ಸಿಬ್ಬಂದಿಗಳು ಮತ್ತು ಎಲೆಕ್ಟ್ರಿಷಿಯನ್ ಮತ್ತು ಮೀಟರ್ ರೀಡರ್ ಗಳಿಗೆ ಕೆಲಸ ಗಳನ್ನು ದಯವಿಟ್ಟು ನೀಡಬೇಡಿ. ಕೆಲವು ಇಲಾಖೆಯ ಸಿಬ್ಬಂದಿಗಳು ಮತ್ತು ಎಜೆನ್ಸಿ ಪಡೆದ ಮೀಟರ್ ರೀಡರ್ ಗಳು ಹೆಚ್ಚಿನ ಹಣ ಪಡೆದು ಕೆಲಸಗಳನ್ನು ನಿರ್ವಹಿಸುತ್ತಿರುವುದು ಕಂಡುಬಂದಿದ್ದು ಇನ್ನೂ ಮುಂದೆ ಇವರುಗಳಿಗೆ ಕೆಲಸಗಳನ್ನು ನೀಡಬಾರದು ಎಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಹಾಗೂ ಸಿವಿಲ್ ಕಂಟ್ರಾಕ್ಟರ್ ಗಳು ಮನೆ ಹಾಗೂ ವಾಣಿಜ್ಯ ಕಟ್ಟಡಗಳ ಕಾಮಗಾರಿಯಲ್ಲಿ ವೈರಿಂಗ್ ಕೆಲಸಗಳನ್ನು ನೇರವಾಗಿ ಸ್ಥಳೀಯ ಹಾಗೂ ಹೊರರಾಜ್ಯ ಗಳ ಎಲೆಕ್ಟ್ರಿಷಿಯನ್ಗಳಿಗೆ ನೀಡುತೀದ್ದು. ಇದರಿಂದ ಪರವಾನಗಿ (ಲೈಸನ್ಸ್ )ಪಡೆದ ವಿದ್ಯುತ್ ಗುತ್ತಿಗೆದಾರರಿಗೆ ತುಂಬಾ ಅನ್ಯಾಯ ವಾಗುತ್ತಿದೆ ತಾವುಗಳು ಸಿವಿಲ್ ಕಾಮಗಾರಿ ಗಳ ಗುತ್ತಿಗೆ ಪಡೆಯುವಾಗ ವಿದ್ಯುತ್ ಕಾಮಗಾರಿ ಗಳನ್ನು ಹೊರತುಪಡೆಸಿ ಉಳಿದ ಕಾಮಗಾರಿಗಳನ್ನು ಪಡೆದುಕೊಳ್ಳಬೇಕಾಗಿ ಮನವಿ. ಇದನ್ನು ಹೊರತುಪಡಿಸಿ ನೇರವಾಗಿ ಎಲೆಕ್ಟ್ರಿಷಿಯನ್ ಗಳಿಗೆ ಕಾಮಗಾರಿಗಳನ್ನು ನೀಡಿದ ಪಕ್ಷದಲ್ಲಿ ಅಂತಹ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ವನ್ನು ನಮ್ಮ ಸಂಘದ ಮುಖಾಂತರ ತಡೆಹಿಡಿಯಲಾಗುವುದು ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಸಂತ ರೈ ಅವರು ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.
Back to top button
error: Content is protected !!