ಕುಶಾಲನಗರ, ಸೆ 14: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯ ವತಿಯಿಂದ ಮಿಷನ್ ಶಕ್ತಿ ಯೋಜನೆಯಡಿ “ಬೇಟಿ ಬಚಾವೊ ಬೇಟಿ ಪಡಾವೋ” ಕಾರ್ಯಕ್ರಮ ದಡಿಯಲ್ಲಿ ತಾಲ್ಲೂಕು ಮಟ್ಟದಲ್ಲಿ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣಾ ಶಿಬಿರವನ್ನು ಕುಶಾಲನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಅಪೌಷ್ಠಿಕ ಮಕ್ಕಳು ಹಾಗೂ ಅವರ ಪೋಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.
ಈ ಕಾರ್ಯಕ್ರಮದ ಉದ್ಘಾನೆಯನ್ನು ಕುಶಾಲನಗರ ಪ್ರಥಮಿಕ ಆರೋಗ್ಯ ಕೇಂದ್ರದ ಮಕ್ಕಳ ತಜ್ಞರಾದ ಡಾ. ಶಿವಕುಮಾರ್ ನೆರವೇರಿಸಿ ಕಾರ್ಯಕ್ರಮದ ಕುರಿತು ಮಾತನಾಡಿದರು.
ಇಂದು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು , ಪೋಷಕರ ಪಾತ್ರ ಮುಖ್ಯವಾಗಿದೆ. ಕಾರಣ ಮಕ್ಕಳ ಪೋಷಕರು ಇಂದು ಉದ್ಯೋಗದ ಕಡೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಮಕ್ಕಳನ್ನು ಶಾಂತ ವಾಗಿರಿಸಲು ಸಿಹಿತಿನಿಸು, ಬಿಸ್ಕೆಟ್,ಚಿಪ್ಸ್ ಇಂತಹ ಅಂಗಡಿಗಳಿಂದ ಖರೀದಿಸಿ ನೀಡುತ್ತಿದ್ದು ಇದರಿಂದ ಮಕ್ಕಳ ಆರೋಗ್ಯ ಸಮಸ್ಯೆ ಯಿಂದ ಬಳಲುತ್ತಿದ್ದಾರೆ ಆದ್ದರಿಂದ ಮಕ್ಕಳ ಎಲ್ಲಾ ತಾಯಂದಿರು ಮುಖ್ಯವಾಗಿ ಗಮನಿಸಬೇಕಾಗಿರುವುದು.ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ನೀಡುವುದು ಉತ್ತಮ ಹಾಗೂ ಮಕ್ಕಳಿಗೆ ಪೌಷ್ಟಿಕಾಹಾರ ಜೊತೆ ಹಣ್ಣುಗಳು, ಮೊಟ್ಟೆ, ಕಾಳುಗಳನ್ನು ಹಾಲು ನೀಡಿ ಹಾಗೂ ಮಕ್ಕಳ ಆರೋಗ್ಯ ಕಾಪಾಡಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಟರಾಜ್ , ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಡಿಕೇರಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿರುವ ಭಾಗ್ಯ ಲಕ್ಷ್ಮಿ/ಸುಖನ್ಯ ಸಮೃದ್ದಿ, ಮಾತೃ ವದನಾ, ಯೋಜನೆಯ ಕುರಿತು ತಿಳಿಸಿ ಹೇಳಿದರು ಹಾಗೂ ಪೂರಕ ಪೌಷ್ಟಿಕ ಆಹಾರ, ಹಾಲು ಮತ್ತು ಮೊಟ್ಟೆ ಗಳನ್ನು ನೀಡುತ್ತಿದ್ದು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಹಾಗೂ ಪೋಷಕರು ಮಗುವಿಗೆ ಮೊಬೈಲ್ ಗಳನ್ನು ನೀಡುತ್ತಿದ್ದು ಬದಲಾಗಿ ಉತ್ತಮ ಪರಿಸರ, ಪ್ರಾಣಿ, ಪಕ್ಷಿಗಳ ಕಡೆ ಮಕ್ಕಳ ಮನವೊಲಿಸಿ ಬದಲಿಸುದರೊಂದಿಗೆ ಉತ್ತಮ ಸಮಾಜದ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ ಹಾಗೂ ಮಗುವಿನ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಲು ಸಹಕಾರಿ ಎಂದು ತಿಳಿಸಿದರು. ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ ಜಿಲ್ಲಾಸ್ಪತ್ರೆ ಮಡಿಕೇರಿಯಲ್ಲಿ NRC(Nutrition Rehabilitation Center) ಇದ್ದು ಇಲ್ಲಿ ಹೆಚ್ಚಿನ ಆರೊಗ್ಯದ ಕಾಳಜಿಗಾಗಿ ಮಕ್ಕಳನ್ನು ದಾಖಲಿಸಬಹುದು ಎಂದರು. ಈ ಕಾರ್ಯಕ್ರಮ ದಲ್ಲಿ ಸೋಮವಾರಪೇಟೆ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೇವಿ ಮುದೋಳ್, ಹಾಗೂ ಮೇಲ್ವಿಚಾರಕಿ ಸಾವಿತ್ರವ್ವ, ಜೆಂಡರ್ ಸ್ಷೆಷಲಿಸ್ಟ್ ಕೇಶಿನಿ ಎಸ್.ಆರ್, ಪೋಣಾಭಿಯಾನ ತಾಲ್ಲೂಕು ಸಂಯೊಜಕರಾದ ರಂಜಿತ, ಆರೋಗ್ಯ ಇಲಾಖೆಯ ಡಯಟಿಷಿಯನ್ ನಯನಾ ಹಾಗೂ ಹೇಮಲತಾ ,ನರ್ಸಿಂಗ್ ಆಪಿಸರ್ ಕೋಹಿಮ್ಸ್ , ಈ ಕಾರ್ಯಕ್ರಮದ ನಿರೂಪಣೆಯನ್ನು ಸಾವಿತ್ರಿ ಸುಂಠಿಕೊಪ್ಪ ಅಂಗನವಡಿಕಾರ್ಯಕರ್ತೆ , ಸ್ವಾಗತ ಜ್ಯೋತಿ ಅಂಗನವಾಡಿ ಕಾರ್ಯಕರ್ತೆ ,ಪ್ರಾರ್ಥನೆ- ಚಂದ್ರಿಕಾ ಅ.ಕಾ ನೆರವೆರಿಸಿದರು.
Back to top button
error: Content is protected !!