ಕುಶಾಲನಗರ, ಸೆ 21: ಸ್ವಚ್ಛತಾ ಸಪ್ತಾಹದ ಅಂಗವಾಗಿ ಕೂಡಿಗೆಯ ಸರ್ಕಾರಿ ಆಸ್ಪತ್ರೆಯ ಆವರಣವನ್ನು ಆಶಾ ಕಾರ್ಯಕರ್ತರು ಹಾಗೂ ವೈದ್ಯ ಸಿಬ್ಬಂದಿಗಳು ಶುಚಿಗೊಳಿಸಿದರು.
ಆಸ್ಪತ್ರೆಯ ಆವರಣದಲ್ಲಿ ಹರಡಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಆಯ್ದು ಸ್ವಚ್ಛಗೊಳಿಸಿದ ಸಿಬ್ಬಂದಿಗಳು ಸಾಮೂಹಿಕವಾಗಿ ಸ್ವಚ್ಛತಾ ಪ್ರತಿಜ್ಞೆ ಗೈದರು.
ಆಶಾ ಕಾರ್ಯಕರ್ತರ ಮೇಲ್ವಿಚಾರಕಿ ಗೀತಾ ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದರು.
ಈ ಸಂದರ್ಭ ಆರೋಗ್ಯ ಕೇಂದ್ರದ ವೈದ್ಯೆ ಡಾ.ದೀಪಿಕಾಮೂರ್ತಿ, ಪ್ರಥಮ ದರ್ಜೆ ಸಹಾಯಕ ಚಂದ್ರೇಶ್, ಸಿಬ್ಬಂದಿ ಮಂಜುನಾಥ್ ಇದ್ದರು.
Back to top button
error: Content is protected !!