ಕುಶಾಲನಗರ, ನ 14: ದಿನಾಂಕ: 13-11-2025 ರ ಗುರುವಾರ ಕುಶಾಲನಗರ ಶ್ರೀ ಮಹಾಗಣಪತಿ ರಥೋತ್ಸವದ ಜಾತ್ರಾ ಸಾಂಸ್ಕೃತಿಕ ಸಂಭ್ರಮದಲ್ಲಿ 6 ನೇ ದಿನದ ಕಾರ್ಯಕ್ರಮದಲ್ಲಿ ನೃತ್ಯ ಸಂಯೋಜಕ ಅಕ್ತರ್ ರವರ ನೇತೃತ್ವದ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ಸತತ 3 ಗಂಟೆಯ ಕಾಲ ಅದ್ದೂರಿ ನೃತ್ಯ ಪ್ರದರ್ಶನ ನೆರವೇರಿತು. ಕರ್ನಾಟಕ ರಾಜ್ಯದ ವಿವಿಧ ರೀತಿಯ ವಿಭಿನ್ನ ಶೈಲಿಯ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸುವ ಮೂಲಕ ಎ ಕ್ರಿಯೇಟಿವ್ ನೃತ್ಯ ಪಟುಗಳು ಜನರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ವಿಶೇಷ ಕೌಶಲ್ಯದ ಮೂಲಕ ನಿರೂಪಣೆ ಹಾಗೂ ಮಿಮಿಕ್ರಿ ಯೊಂದಿಗೆ ಮೈಸೂರಿನಿ ಪ್ರಖ್ಯಾತ ಶ್ರೀ ಮನೋಜ್ ಕುಮಾರ್ ರವರು ಕಾರ್ಯಕ್ರಮವನ್ನು ನೆರವೇರಿಸಿದರು. ಹಲವಾರು ಆಕರ್ಷಣೀಯ ಪಾಶ್ಚಾತ್ಯ ನೃತ್ಯಗಳು ನೆರೆದಿದ್ದ ಜನರ ಮೈ ರೋಮಾಂಚನಗೊಳಿಸಿತು. ಇದೇ ಸಂದರ್ಭ ಕುಶಾಲನಗರ ಜಾತ್ರಾ ಸಾಂಸ್ಕತಿಕ ಸಮಿತಿಯ ಅಧ್ಯಕ್ಷರಾದ ಶ್ರೀ ವಿ.ಪಿ ಶಶಿಧರ್ ಸಾಂಸ್ಕತಿಕ ಸಮಿತಿಯ ಸದಸ್ಯರುಗಳಾದ ಶ್ರೀ ವಿ.ಎಸ್ ಆನಂದ ಕುಮಾರ್, ಶ್ರೀ ಬಿ. ಎಸ್ ಚಂದನ್ ಕುಮಾರ್ ಮತ್ತು ಶ್ರೀ ವಿ. ಜಿ ನವೀನ್ ಕುಮಾರ್ ಸೇರಿ ನೃತ್ಯ ಪ್ರದರ್ಶನ ಮಾಡಿದಂತಹ ನೃತ್ಯ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ಮತ್ತು ಬಹುಮಾನವನ್ನು ನೀಡುವ ಮೂಲಕ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ಈ ಕಾರ್ಯಕ್ರಮಕ್ಕೆ ಹಲವಾರು ಸಾರ್ವಜನಿಕರು ಮತ್ತು ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ಪೋಷಕರು ತಮ್ಮ ಕೆಲಸ ಕಾರ್ಯಗಳನ್ನು ಬಿಡುವು ಮಾಡಿಕೊಂಡು ಕಾರ್ಯಕ್ರಮವನ್ನು ಕೊನೆಯ ವರೆಗೂ ವೀಕ್ಷಿಸಿ ಚಪ್ಪಾಳೆಯ ಮೂಲಕ ನೃತ್ಯ ಪಟುಗಳಿಗೆ ಪ್ರೋತ್ಸಾಹಿಸಿ ಕುಣಿದು ಕುಪ್ಪಳಿಸಿದರು.
Back to top button
error: Content is protected !!