ಸಭೆ

ಹನುಮ ಜಯಂತಿ ಆಚರಣೆ ಪೂರ್ವಭಾವಿ ಸಭೆ: ಡಿ.2 ರಂದು ಅದ್ದೂರಿ ಹನುಮ ಜಯಂತಿ ಆಚರಣೆಗೆ ನಿರ್ಧಾರ

ಕುಶಾಲನಗರ, ಅ 25 : ಮಡಿಕೇರಿ ದಸರಾ ಮಾದರಿಯಲ್ಲಿ ಕುಶಾಲನಗರದಲ್ಲಿ ಡಿ.2 ರಂದು ಅದ್ದೂರಿ ಹನುಮ ಜಯಂತಿ ಆಚರಣೆಗೆ ಶನಿವಾರ ನಡೆದ ತಾಲ್ಲೂಕಿನ ದಶ ಮಂಟಪಗಳ ಆಚರಣಾ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕುಶಾಲನಗರ ಪ್ರವಾಸಿ ಮಂದಿರದಲ್ಲಿ ದಶ ಮಂಟಪಗಳ ಆಚರಣಾ ಸನಿತಿ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಮಂಟಪಗಳ ಪದಾಧಿಕಾರಿಗಳು ಹಾಗೂ ಮುಖಂಡ ಸಭೆಯಲ್ಲಿ ಜಯಂತಿ ಆಚರಣೆ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಮಂಟಪದ ಬೆಳಕಿನ ವ್ಯವಸ್ಥೆಗೆ ಮತ್ತು ಧ್ವನಿವರ್ಧಕಕ್ಕೆ ಯಾವುದೇ ಕಟ್ಟಡಗಳನ್ನು ಉಪಯೋಗಿಸಿಕೊಳ್ಳದೆ ಧ್ವನಿವರ್ಧಕಕ್ಕೆ ಒಂದು ವಾಹನ ಹಾಗೂ ಬೆಳಕಿನ ವ್ಯವಸ್ಥೆಗೆ ಒಂದು ಲಘು ವಾಹನ (ಪಿಕ್‌ಪ್ ಜೀಪ್ ವರೆಗೆ ಮಾತ್ರ) ಬಳಸಬಹುದು
2. ಕಲಾಕೃತಿಗಳನ್ನು ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ನಿಲ್ಲಿಸಿ ಪ್ರದರ್ಶನ ಮಾಡುವಂತಿಲ್ಲ. ಎಲ್ಲವೂ ಎರಡು ಟ್ರಾಕ್ಟರ್‌ನಲ್ಲೇ ಅಳವಡಿಸಬೇಕು
3. ಯಾವುದೇ ಕಾರಣಕ್ಕೂ ಜೆಸಿಬಿ, ಇಟಾಚಿ ಅಥವಾ ಮರದ ಟೆಂಬರ್ ಕ್ರೈನ್‌ಗಳನ್ನು ಬಳಸಿಕೊಳ್ಳುವಂತಿಲ್ಲ.
4. ಮಂಟಪಗಳಲ್ಲಿ ಅಬ್ಬರದ ಧ್ವನಿ ಬಳಕೆಯಲ್ಲಿ ಪೊಲೀಸ್ ಇಲಾಖೆಯ ನಿಯಮಾದಂತೆ ಇತಿ ಮಿತಿ ಅನುಸರಿಸತಕ್ಕದ್ದು. ಪಶ್ಚಾತ್ಯ ಸಂಗೀತ, ಚಿತ್ರಗೀತೆ ಹೊರತುಪಡಿಸಿ ಭಕ್ತಿ ಸಂಗೀತಕ್ಕೆ ಪ್ರಾಧಾನ್ಯತೆ ನೀಡತಕ್ಕದ್ದು.
5. ಮಂಟಪಗಳಲ್ಲಿ ಅಪಾಯಕಾರಿ ಸಿಡಿಮದ್ದುಗಳ ಬಳಕೆ ನಿಷಿದ್ಧ.
6. ತೀರ್ಪುಗಾರರು ಬಂದಾಗ ಪ್ರದರ್ಶನಕ್ಕೆ ಮತ್ತು ವೀಕ್ಷಣೆಗೆ ಸ್ಥಳಾವಕಾಶವನ್ನು ಸಮಿತಿ ಪದಾಧಿಕಾರಿಗಳು ವ್ಯವಸ್ಥೆ ಮಾಡಬೇಕು.
7. ಇತರ ಮಂಟಪಗಳ ಪ್ರದರ್ಶನದ ಸಂದರ್ಭ ಪ್ರದರ್ಶನ ಮಂಟಪದ ಹಿಂದೆ ಮತ್ತು ಮುಂದೆ ಇರುವ ಮಂಟಪಗಳು ತಮ್ಮ ಧ್ವನಿವರ್ಧಕವನ್ನು ಸಂಪೂರ್ಣ ಸ್ಥಗಿತಗೊಳಿಸತಕ್ಕದ್ದು.
8. ತಾಂತ್ರಿಕ ದೋಷದಿಂದ ಮಂಟಪ ಸ್ಥಗಿತಗೊಂಡಲ್ಲಿ ಹಿಂದಿರುವ ಮಂಟಪಗಳಿಗೆ ಸ್ಥಳಾವಕಾಶ ನೀಡಿ ಶೋಭಾಯಾತ್ರೆಯನ್ನು ಸಾರಾಗವಾಗಿಸತಕ್ಕದ್ದು.
9. ಪ್ರತಿ ಮಂಟಪವು ದೇವಾಲಯದ ಆವರಣದಲ್ಲೇ ಮಂಟಪ ತಯಾರಿ ನಡೆಸಿ ಶೋಭಾಯಾತ್ರೆ ಆಗಮಿಸತಕ್ಕದ್ದು.
ತೀರ್ಪು ನಡೆಯುವ ಸ್ಥಳದಲ್ಲಿ ಯಾವುದೇ ಮಂಟಪ ತಯಾರಿ ನಡೆಸಕೂಡದು
11. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು,
12. ಮಂಟಪಗಳಲ್ಲಿ ಯಾವುದೇ ರೀತಿಯ ಲೇಸರ್ ಲೈಟ್ ಬಳಸುವಂತಿಲ್ಲ.
13. ಧ್ವನಿವರ್ಧಕಕ್ಕೆ ಯಾವುದೇ ರೀತಿಯ ಕೈನ್ ಬಳಸುವಂತಿಲ್ಲ.
14. ಎಲ್ಲಾ ಮಂಟಪಗಳು ಕಡ್ಡಾಯವಾಗಿ 12 ಬಾಕ್ಸ್‌ಗಳಿಂದ (6+6) ಕೂಡಿದ ಧ್ವನಿವರ್ಧಕವನ್ನು ಬಳಸುವುದು.
15 ಎಲ್ಲಾ ಮಂಟಪಗಳು ತೀರ್ಪಿನ ಬಳಿಕ ತೀರ್ಪುಗಾರರು ನೀಡಿದ ಅಂಕಗಳನ್ನು ಅಂಕ ಪೆಟ್ಟಿಗೆಯಲ್ಲಿ ಹಾಕಿದ ಮೇಲೆ ವೇದಿಕೆ ಹಿಂಭಾಗದಲ್ಲಿರುವ ಕೊಠಡಿಯ ಒಳಗೆ ತೆಗೆದು ಕೊಂಡು ಹೋಗು ಸಮಯದಲ್ಲಿ ಪ್ರತಿ ಮಂಟಪದಿಂದ ಕೇವಲ ಒಬ್ಬ ಪ್ರತಿನಿಧಿಗೆ ಅವಕಾಶವಿರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಮೊಬೈಲ್ ಪೋನ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಆ ಕೊಠಡಿಗೆ ತೆಗೆದುಕೊಂಡು ಹೋಗಲು ಪದಾಧಿಕಾರಿಗಳಿಗೆ ಅವಕಾಶವಿರುವುದಿಲ್ಲ.
16. ಅಂತಿಮ ತೀರ್ಪಿನ ಅಂಕಗಳ ಎಣಿಕೆ ಆದ ನಂತರ ಪ್ರತಿನಿಧಿಗಳು ಹೊರಗೆ ಹೋಗಲು ಅವಕಾಶವಿರುತ್ತದೆ.
ಪ್ರತಿ ಮಂಟಪಗಳ ಸಮಿತಿ ಪದಾಧಿಕಾರಿಗಳು ಶೋಭಾಯಾತ್ರೆಯನ್ನು ಯಶ್ವಸಿಗೊಳಿಸಲು ಈ ಮೂಲಕ ಕೋರುತ್ತೇವೆ. ಮೇಲಿನ ನಿಯಮಗಳಿಗೆ ಬದ್ಧರಾಗಿ
ದಶ ಮಂಟಪಗಳ ಸಮಿತಿ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ,ಉಪಾಧ್ಯಕ್ಷರಾದ ಎಚ್.ಟಿ.ವಸಂತ, ಟಿ.ವಿ.ಕಿಶೋರ್,ಗುಡ್ಡೆಹೊಸೂರು ಬಾಲಕೃಷ್ಣ, ಪ್ರದಾನ ಕಾರ್ಯದರ್ಶಿ ರಾಮನಾಥನ್, ಸಹ ಕಾರ್ಯದರ್ಶಿ ಸುನಿಲ್,ಖಜಾಂಚಿ ಡಿ.ವಿ.ಗಿರೀಶ್ ಮುಖಂಡರಾದ ರಾಜೀವ್ ,ಅನುದೀಪ್,ಸುಮಾನ್,ಮಂಜುನಾಥ್, ರಾಜು, ಡಿ.ಶ್ರೀಕಾಂತ್, ಮಧು, ವಸಂತ ರೈ, ಹರೀಶ್, ಸಚಿನ್ ,ಭಾಸ್ಕರ್ ನಾಯಕ್ ಮತ್ತಿತರರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!