ಸಭೆ

ಪುತ್ತರಿ ವೆಳ್ಳಾಟ್ಟಮ್ ಪೂರ್ವಭಾವಿ ಸಭೆ

ಕುಶಾಲನಗರ, ಅ 19: ಕುಶಾಲನಗರದ ಯೋಗಾನಂದ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಮುತ್ತಪ್ಪ ದೇವಾಲಯದ ಮಡಪ್ಪುರ ಸಭಾಂಗಣದಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟಿನ ಅಧ್ಯಕ್ಷ ಕೆ.ವರದ ಅಧ್ಯಕ್ಷತೆಯಲ್ಲಿ ನವೆಂಬರ್ 8 ರಂದು ನಡೆಯಲ್ಲಿರುವ ಪುತ್ತರಿ ವೆಳ್ಳಾಟ್ಟಮ್ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಪುತ್ತರಿ ವೆಳ್ಳಾಟ್ಟಮ್ ಗೆ ಆಗುವ ಖರ್ಚು ವೆಚ್ಚಗಳು ಮತ್ತು ಹಣ ಸಂಗ್ರಹಿಸುವ ಬಗ್ಗೆ ಚರ್ಚೆ ನಡೆಯಿತು. ಉತ್ಸವದ ದಿನ ಬರುವ ಎಲ್ಲಾ ಭಕ್ತಾದಿಗಳಿಗೆ ಅನ್ನದಾನ ನೀಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು ಹಾಗೂ ದೇವಾಲಯದ ಮುಂಭಾಗದಲ್ಲಿರುವ ನಿವೇಶನವನ್ನು ಖರೀದಿಸುವ ಮೂಲಕ ದೇವಾಲಯದ ಉಪಯೋಗಕ್ಕೆ ಬಳಸುವಂತೆ ಇದಕ್ಕಾಗಿ ಶ್ರೀ ಮುತ್ತಪ್ಪ ದೇವಾಲಯದ ಪ್ರತಿಯೊಬ್ಬ ಸದಸ್ಯರು ತಮ್ಮ ಕೈಯಲ್ಲಿ ಆದಷ್ಟು ವಂತಿಗೆ ನೀಡುವಂತೆ ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟಿನ ಪದಾಧಿಕಾರಿಗಳು ವಿನಂತಿಸಿಕೊಂಡರು. ಸಭೆಯಲ್ಲಿ ಟ್ರಸ್ಟ್ ಕಾರ್ಯದರ್ಶಿ ರಂಜಿತ್ ಕುಮಾರ್ ಎಂ.ಡಿ, ಖಜಾಂಚಿ ಶೇಖರನ್ ,ಉಪಾಧ್ಯಕ್ಷ ಬಾಬಿ,ಪ್ರಮುಖರಾದ ನರೇಶ್ ಕುಮಾರ್,ಹರೀಂದ್ರನ್ ,ಅಶೋಕ್ ಮುಂತಾದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!