ಪಿರಿಯಾಪಟ್ಟಣ ಸೆ 01: ತಾಲೂಕಿನ ಮಾಲಂಗಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಂದೇ ಪಕ್ಷದ ಬೆಂಬಲಿತ ಇಬ್ಬರು ಅಭ್ಯರ್ಥಿಗಳು ಚುನಾವಣೆ ಎದುರಿಸಿ ಗೆದ್ದವರು ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಸೋತವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಸಂಘವನ್ನು ಸೂಪರ್ ಸೀಡ್ ಮಾಡುವಂತೆ ಸಹಕಾರ ಅಭಿವೃದ್ಧಿ ಅಧಿಕಾರಿಗಳಿಗೆ ಪತ್ರ ಬರೆದ ಘಟನೆ ನಡೆಯಿತು.
ತಾಲೂಕಿನ ಮಾಲಂಗಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿ ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳಾಗಿ ಗಣೇಶ್ ಮತ್ತು ರಘು ಎಂಬುವ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಸಂಘದಲ್ಲಿ ಒಟ್ಟು 11 ಜನ ನಿರ್ದೇಶಕರಿದ್ದು, ಇಬ್ಬರಲ್ಲೂ ಒಮ್ಮತ ಮೂಡದ ಕಾರಣಕ್ಕೆ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಸಹ ಮತ ಚಲಾಯಿಸುವ ಕಾಯಿದೆ ಇರುವ ಕಾರಣ ಚುನಾವಣಾಧಿಕಾರಿ ಎಂ.ಸಚಿನ್ ಸೇರಿದಂತೆ ಒಟ್ಟು 12 ಮತಗಳು ಚಲಾವಣೆಯಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಗಣೇಶ್ 6 ಮತಗಳು ಹಾಗೂ ರಘು 6 ಮತಗಳನ್ನು ಸಮವಾಗಿ ಪಡೆದುಕೊಂಡರು ಹಾಗಾಗಿ ಲಾಟರಿ ಮೂಲಕ ಆಯ್ಕೆ ಮಾಡಲು ತೀರ್ಮಾನಿಸಲಾಗಿ ಗಣೇಶ್ ರವರು ಲಾಟರಿ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ
ರಘು ಹಾಗೂ ಅವರ ಬೆಂಬಲಿತ ನಿರ್ದೇಶಕರು ಸಂಘವನ್ನು ಸೂಪರ್ ಸೀಡ್ ಮಾಡುವಂತೆ ಆರೋಪಿಸಿ ಸಹಕಾರ ಅಭಿವೃದ್ಧಿ ಅಧಿಕಾರಿಗಳಿಗೆ ರಾಜಿನಾಮೆ ಸಲ್ಲಿಸುತ್ತಿರುವುದಾಗಿ
ತಿಳಿಸಿ ಹೊರ ನಡೆದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಗಣೇಶ್ ರವರ ಬೆಂಬಲಿಗರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಗಣೇಶ್ ಮಾತನಾಡಿ ಹಾಲು ಉತ್ಪಾದಕರ ಹಿತ ಕಾಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಆದ್ದರಿಂದ ಎಲ್ಲರೂ ಕೈಜೋಡಿಸಬೇಕು ಮತ್ತು ಸಹಕಾರ ಸಂಘಕ್ಕೆ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ ಆದ್ದರಿಂದ ಎಲ್ಲರೂ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಮೈಮುಲ್ ವಿಸ್ತರಣಾಧಿಕಾರಿ ಸಚಿನ್, ನಿರ್ದೇಶಕರಾದ ಗಣೇಶ್ ಎಂ ಎ, ರವಿ ನಾಯಕ, ಚಿಕ್ಕವೀರ, ವಿಶ್ವನಾಥ್, ಮೀನಾಕ್ಷಮ್ಮ, ಗೌರಮ್ಮ, ರಘು, ರಾಮೇಗೌಡ, ಸ್ವಾಮಿಗೌಡ, ಚಂದ್ರೇಗೌಡ ಗ್ರಾಮ ಪಂಚಾಯಿತಿ ಸದಸ್ಯ ಹರಿಶ್ ಮುಖಂಡರಾದ ಶೋಯಾಬ್, ಮಾಲಂಗಿ ಕುಮಾರ್, ಉಮೇಶ್, ಪ್ರಸನ್ನಕುಮಾರ್, ರವಿ, ಬಲರಾಮ, ಸುರೇಶ್, ಯದುಕುಮಾರ್ ಮತ್ತು ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರು ಉಪಸ್ಥಿತದ್ದರು.
Back to top button
error: Content is protected !!