ಕ್ರೀಡೆ

ರಾಜ್ಯಮಟ್ಟದ ಐಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌: ತೊರೆನೂರಿನ ಸಾಧನಾ ಸಾಧನೆಗೆ ಎರಡು ಕಂಚಿನ‌ ಪದಕ

ಕುಶಾಲನಗರ, ಮೇ 29: ಕುಶಾಲನಗರದ ಏಂಜಲ್ಸ್ ವಿಂಗ್ಸ್ ಸ್ಕೇಟಿಂಗ್ ಅಕಾಡೆಮಿಯ ಸ್ಕೇಟರ್ ಸಾಧನಾ ತೊರೆನೂರು, 2026ರ ಮೇ 26 ಮತ್ತು 27ರಂದು ಡೆಹರಾಡೂನ್‌ನ ಹಿಮಾದ್ರಿ ಐಸ್ ರಿಂಕ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಐಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಶಾರ್ಟ್ ಟ್ರ್ಯಾಕ್ ಮತ್ತು ಲಾಂಗ್ ಟ್ರ್ಯಾಕ್ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ. ಅಲ್ಲದೇ 2026ರ ಜೂನ್ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೂ ಆಯ್ಕೆಯಾಗಿದ್ದಾರೆ.

ಸಾಧನಾ ತೊರೆನೂರು, ಕುಶಾಲನಗರದ ಯೂನಿಕ್ ಅಕಾಡೆಮಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ, ಕರ್ನಾಟಕ ಐಸ್ ಸ್ಕೇಟಿಂಗ್ ಅಸೋಸಿಯೇಷನ್ (KISA) ಆಯೋಜಿಸಿದ್ದ 1ನೇ ಕರ್ನಾಟಕ ರಾಜ್ಯ ಐಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಳು. 2026ರ ಮೇ 26 ಮತ್ತು 27ರಂದು ಡೆಹರಾಡೂನ್‌ನ ಹಿಮಾದ್ರಿ ಐಸ್ ರಿಂಕ್‌ನಲ್ಲಿ ಈ ಸ್ಪರ್ಧೆ ನಡೆಯಿತು.

ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ ಸಾಧನಾ, ಶಾರ್ಟ್ ಟ್ರ್ಯಾಕ್ ಮತ್ತು ಲಾಂಗ್ ಟ್ರ್ಯಾಕ್ ಐಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿ, 11 ರಿಂದ 13 ವರ್ಷ ವಯಸ್ಸಿನ ಜೂನಿಯರ್ ಡಿ ಬಾಲಕಿಯರ ವಿಭಾಗದಲ್ಲಿ 500 ಮೀ ಮತ್ತು 1000 ಮೀ ಲಾಂಗ್ ಟ್ರ್ಯಾಕ್ ಸ್ಪರ್ಧೆಗಳಲ್ಲಿ 2 ಕಂಚಿನ ಪದಕಗಳನ್ನು ಗೆದ್ದಿದ್ದಾಳೆ.

2025 ರಿಂದ ಮೈಸೂರು ನಗರದ ಸಿಟಿರನ್ ರೋಲರ್ ಸ್ಕೇಟಿಂಗ್ ಅಕಾಡೆಮಿಯಲ್ಲಿ, ಏಕಲವ್ಯ ಪ್ರಶಸ್ತಿ ವಿಜೇತ ಕೋಚ್ ಡಾ. ವರ್ಷಾ ಎಸ್. ಪುರಾಣಿಕ್ ಅವರ ಬಳಿ ಸಾಧನಾ ತರಬೇತಿ ಪಡೆಯುತ್ತಿದ್ದಾಳೆ.

ಸಾಧನಾ ತೊರೆನೂರು 2024ರಲ್ಲಿ ಕುಶಾಲನಗರದ ಏಂಜಲ್ಸ್ ವಿಂಗ್ಸ್ ಸ್ಕೇಟಿಂಗ್ ಅಕಾಡೆಮಿಯಲ್ಲಿ ತಮ್ಮ ಅಭ್ಯಾಸವನ್ನು ಆರಂಭಿಸಿದರು. ಕಡಿಮೆ ಅವಧಿಯಲ್ಲೇ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ. ಬ್ಯಾಂಡಿ ನ್ಯಾಷನಲ್ಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಕರ್ನಾಟಕ ಬ್ಯಾಂಡಿ ತಂಡಕ್ಕೆ ಹಲವಾರು ಪದಕಗಳನ್ನು ತಂದುಕೊಟ್ಟಿದ್ದಾರೆ.

ಸಾಧನಾ ಅವರು ಟಿ.ವಿ. ರವಿ ಮತ್ತು ಸುಪ್ರೀತಾ ಎ.ಎಸ್. ಅವರ ಪುತ್ರಿ.

Related Articles

Leave a Reply

Your email address will not be published. Required fields are marked *

Back to top button
error: Content is protected !!