ಕುಶಾಲನಗರ, ಸೆ 24:ಕಣಿವೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಹೆಚ್.ಎನ್.ಕಪನಪ್ಪ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಂಘವು 84 ಸದಸ್ಯರನ್ನು ಹೊಂದಿದ್ದು ಅತ್ಯಧಿಕ ಪ್ರಮಾಣದಲ್ಲಿ ಹಾಲು ಸಂಗ್ರಹ ಮಾಡುತ್ತಿದೆ.
ಸಂಘದ ವತಿಯಿಂದ ಪ್ರಸಕ್ತ ಸಾಲಿನಲ್ಲಿ 1.52 ಲಕ್ಷ ನಿವ್ವಳ ಲಾಭ ಗಳಿಸಿದ್ದು ಪ್ರಗತಿಯತ್ತ ದಾಪುಗಾಲಿಡುತ್ತಿದೆ. ಕಳೆದ 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಂಘಧ 9/11 ದಾಖಲೀಕರಣ ಗೊಳಿಸಲಾಗಿದೆ ಎಂದು ಅಧ್ಯಕ್ಷ ಕಪನಪ್ಪ ಹೇಳಿದರು.
ಸಂಘಕ್ಕೆ ಅಧಿಕ ಪ್ರಮಾಣದಲ್ಲಿ ಹಾಲು ಪೂರೈಕೆ ಮಾಡುತ್ತಿರುವ ಸದಸ್ಯರಾದ ಹೆಚ್.ಬಿ.ಪ್ರಕಾಶ್, ಹೆಚ್.ಪಿ.ಸಾಗರ್, ಹೆಚ್.ಸಿ.ವಿಶ್ವನಾಥ್ ಅವರನ್ನು ಮಹಾಸಭೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಹಾಗೆಯೇ ಸಂಘದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಪುತ್ರಿ ಅಂಕಿತಾ, ರಮೇಶ್ ಪುತ್ರಿ ತೇಜಸ್ವಿನಿ ಅವರಿಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಹಾಸನ ಹಾಲು ಒಕ್ಕೂಟದ ಕೊಡಗು ನಿರ್ದೇಶಕ ಕೆ.ಕೆ.ಹೇಮಂತಕುಮಾರ್ ಹಾಗೂ ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ.ವೀಣಾ ಅವರು ಈ ಸಂದರ್ಭ ಮಾತನಾಡಿ ಹೈನು ಕೃಷಿಕರು ಹಾಲಿನ ಗುಣಮಟ್ಟ ಹಾಗೂ ಸ್ವಚ್ಛತೆಗೆ ಒತ್ತು ಕೊಡುವ ಬಗ್ಗೆ ಅಗತ್ಯ ಸಲಹೆ ನೀಡಿದರು.
ಸಂಘದ ಸದಸ್ಯರಿಗೆ ಊಟದ ಭತ್ಯೆಯಾಗಿ 100 ರೂ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ಬಿ.ಡಿ.ಮಹದೇವ, ನಿರ್ದೇಶಕರಾದ ಆರ್.ಜಿ.ಮಹೇಶ್, ಹೆಚ್.ಎಸ್.ರಮೇಶ್, ಹೆಚ್.ಎಸ್.ಮಲ್ಲಿಕಾರ್ಜುನ, ಹೆಚ್.ಬಿ.ನಿಂಗಾನಂದ, ಚನ್ನಬಸಪ್ಪ, ಹೆಚ್.ಬಿ.ಪ್ರಕಾಶ, ಹೃತಿಕ್, ಕಮಲಾಕ್ಷಿ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಸವಿತ, ಹಾಲು ಪರೀಕ್ಷಕಿ ಆಶಾ ಇದ್ದರು.
ಕಮಲಾಕ್ಷಿ ನಿರೂಪಿಸಿ, ರಮೇಶ್ ಸ್ವಾಗತಿಸಿದರು.ಮಹದೇವ ವಂದಿಸಿದರು.
Back to top button
error: Content is protected !!