ಕುಶಾಲನಗರಗ, ಸೆ. 14: ನಂ 242 ನೇ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಮೊದಲಿಗೆ ಹಿಂದಿನ ವಾರ್ಷಿಕ ಮಹಾಸಭೆ ವರದಿಯನ್ನು ಓದಿ ದಾಖಲು ಮಾಡಲಾಯಿತು. ನಂತರ ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನ ವಿತರಣೆ ಮಾಡಲಾಯಿತು.
ಸಭೆಯಲ್ಲಿ ಸಂಘದ ಪ್ರಗತಿಗೆ ಪೂರಕವಾದ ವಿವಿಧ ಬಗೆಯ ಅಂಶಗಳನ್ನು ಒಳಗೊಂಡ ಸಮಗ್ರ ಚರ್ಚೆ ನಡೆಯಿತು. ಸದಸ್ಯರು ಸಲಹೆ ಸೂಚನೆಗಳನ್ನು ಆಡಳಿತ ಮಂಡಳಿಗೆ ನೀಡಿದರು. 2025-26ನೇ ಸಾಲಿನ ವಾರ್ಷಿಕ ಬಜೆಟ್ ಮಂಡನೆ, ನಿವ್ವಳ ಲಾಭಗಳ ವಿಲೇವಾರಿಗಳ ಬಗ್ಗೆ ಅನುಮೋದನೆ ಸೇರಿದಂತೆ ಅಭಿವೃದ್ಧಿಯ ಹಿತದೃಷ್ಟಿಯಿಂದ ಸಂಘದ ಬೆಳವಣಿಗೆಗೆ ಪೂರಕವಾದ ವಿಷಯಗಳ ಪ್ರಸ್ತಾವನೆಗಳು ನಡೆದವು.
ಸಂಘವು ಸತತವಾಗಿ 6ನೇ ಬಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಮತ್ತು ಅಪೆಕ್ಸ್ ಬ್ಯಾಂಕ್ ನಿಂದ ಬಹುಮಾನವನ್ನು ಪಡೆಯುತ್ತಿರುವ ಬಗ್ಗೆ ಸಭೆಯಲ್ಲಿ ಹಾಜರಿದ್ದ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ರೈತರಿಗೆ, ಸಂಘದ ಗ್ರಾಹಕರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಂಘವು ಸಹಕಾರಿಯಾಗಲಿ ಎಂದು ಅನೇಕ ಸದಸ್ಯರು ಸಭೆಯಲ್ಲಿ ಪ್ರಸ್ತಾವನೆ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಕೆ. ಹೇಮಂತ್ ಕುಮಾರ್, ಸದಸ್ಯರ ಸಹಕಾರದೊಂದಿಗೆ ಈ ಸಾಲಿನಲ್ಲಿ 81 ಲಕ್ಷದ 15 ಸಾವಿರದ 541 ರೂಗಳಷ್ಟು ಲಾಭ ಗಳಿಸಿದೆ. ಸದಸ್ಯರ, ಆಡಳಿತ ಮಂಡಳಿ, ಸಿಬ್ಬಂದಿಗಳ ಪ್ರಯತ್ನದಿಂದಾಗಿ ಸಂಘವು ಸತತವಾಗಿ ಜಿಲ್ಲಾ ಕೇಂದ್ರ ಬ್ಯಾಂಕ್, ಮತ್ತು ಆಫೇಕ್ಸ್ ಬ್ಯಾಂಕ್ ನಿಂದ ಪ್ರಶಸ್ತಿ ಮತ್ತು ಬಹುಮಾನವನ್ನು ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ರೈತರ ಪ್ರಗತಿಪರ ಯೋಜನೆಗೆ ಸಹಕಾರ ನೀಡುವುದರ ಜೊತೆಗೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸಲಾಗುವುದು. ಸಂಘದ ಅಭಿವೃದ್ಧಿ ದೃಷ್ಠಿಯಿಂದ ಸ್ತಿರಾಸ್ತಿಗಳ ಖರೀದಿ, ಕಟ್ಟಡ ನಿರ್ಮಾಣದ ಮೂಲಕ ಸಂಘದ ಏಳಿಗೆಗೆ ಆಡಳಿತ ಮಂಡಳಿ ಕೆಲಸ ನಿರ್ವಹಿಸಿದೆ ಎಂದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ವಿ. ಬಸಪ್ಪ, ನಿರ್ದೇಶಕರಾದ ಕೆ.ಟಿ.ಅರುಣ್ ಕುಮಾರ್, ಕೃಷ್ಣೇಗೌಡ, ಕೆ.ಕೆ.ಪವಿತ್ರ, ರಮೇಶ್, ಕೆ.ಜೆ.ಕುಮಾರ್, ನಾಗರಾಜ್, ಎಸ್.ಆರ್ ಅರುಣ್ ರಾವ್, ಕೆ.ಬಿ. ರಾಮಚಂದ್ರ, ಕೆ.ಪಿ. ರಾಜು, ಎಸ್. ಎಸ್. ಕೃಷ್ಣ, ಜಯಶ್ರೀ, ವೃತ್ತಿ ಪರ ನಿರ್ದೇಶಕ ನಾಗೇಂದ್ರ, ಡಿ. ಎನ್. ಚಂದ್ರಶೇಖರ್, ಡಿ.ಸಿ.ಸಿ.ಬ್ಯಾಂಕ್ ನ ಮೇಲ್ವಿಚಾರಕ ಅಬ್ದುಲ್ ರಶೀದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಹರ್ಷ ಹಾಜರಿದ್ದರು.
Back to top button
error: Content is protected !!