ಕುಶಾಲನಗರ, ಆ. 29: ಶ್ರೀ ದೊಡ್ಡಮ್ಮ ತಾಯಿ ಕಾಫಿ ಹಸ್ಕ್ ವ್ಯಾಪಾರಿಗಳ ಸಂಘ, ಲಾರಿ ಮಾಲೀಕರ ಸಂಘ,ಹಾಗೂ ಕಾರ್ಮಿಕ ಸಂಘ ಕೈಗಾರಿಕಾ ಪ್ರದೇಶ ಕೂಡ್ಲೂರು ಇವರ ವತಿಯಿಂದ ಪ್ರಥಮ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವ ಆಚರಣೆಯು ಶ್ರಧ್ಧಾಭಕ್ತಿಯಿಂದ ನೆರವೇರಿತು.
ಕೂಡ್ಲೂರು ಕೈಗಾರಿಕಾ ಸರ್ಕಲ್ ನಲ್ಲಿ ಸುಂದರವಾಗಿ ನಿರ್ಮಿಸಲಾಗಿದ್ದ ಗಣಪತಿ ಫೆಂಡಾಲ್ ನಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಮೂರು ದಿನಗಳಲ್ಲಿ ಸಂಜೆ ವಿವಿಧ ಸಂಸ್ಕೃತಿಗಳ ಕಾರ್ಯಕ್ರಮಗಳು ನಡೆದವು.
ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ದೊಡ್ಡಮ್ಮ ತಾಯಿ ಕಾಫಿ ಹಸ್ಕ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ಲಾರಿ ಮಾಲಿಕರ ಸಂಘದ ಅಧ್ಯಕ ಗಣೇಶ್, ಮಾಜಿ ಅಧ್ಯಕ್ಷ ಹೇಮರಾಜ್, ಕೂಡುಮಂಗಳೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಸಹಕಾರ ಸಂಘದ ಮಾಜಿ ನಿರ್ದೇಶಕ ಕೆ.ಕೆ. ನಾಗರಾಜಶೆಟ್ಟಿ, ಸೇರಿದಂತೆ ಸಂಘದ ಉಪಾಧ್ಯಕ್ಷ, ನಿರ್ದೇಶಕರು ಸದಸ್ಯರು ಸೇರಿದಂತೆ ನೂರಾರು ಗ್ರಾಮಸ್ಥರು ಹಾಜರಿದ್ದರು.
Back to top button
error: Content is protected !!