ಸಾಂಸ್ಕೃತಿಕ

ಸಂಭ್ರಮ ಸಡಗರದ ಗೋಕುಲೋತ್ಸವ: ಗಮನ ಸೆಳೆದ ರಾಧಕೃಷ್ಣವೇಷಧರಿಸಿದ ಪುಟಾಣಿಗಳು

ಕುಶಾಲನಗರ, ಆ 24: ವಿಶ್ವ ಹಿಂದೂ ಪರಿಷತ್,ಬಾಲಗೋಕುಲ,ಭಜನಾ ಮಂಡಳಿ,ರಂಗಭಾರತಿ ಕಲಾಂಮದಿರಮ್ ಸಹಯೋಗದೊಂದಿಗೆ ವಿಶ್ವ ಹಿಂದೂ ಪರಿಷತ್ ಸ್ಥಾಪನ ದಿವಸ ಮತ್ತು ಕೃಷ್ಣ ಜನ್ಮಾಷ್ಠಮಿ ಸಮಾರಂಭ ಹಾಗೂ ಗೋಕುಲೋತ್ಸವ ರಾಧ ಕೃಷ್ಣ ವೇಷ ಸ್ಪರ್ಧೆ ಜ್ಞಾನ ಭಾರತಿ ಶಾಲೆಯ ಮಾರುತಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಗೋಕುಲೋತ್ಸವದ ಅಂಗವಾಗಿ ಪುಟಾಣಿ ಮಕ್ಕಳು ರಾಧಾಕೃಷ್ಣ ವೇಷ ಧರಿಸಿ ಎಲ್ಲರ ಗಮನ ಸೆಳೆದರು.ಪಟ್ಟಣದ ವಿವಿಧೆಡೆಯಿಂದ 49 ಮಕ್ಕಳು ಪಾಲ್ಗೊಂಡಿದ್ದರು. ಎಲ್ಲ ಮಕ್ಕಳಿಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಅಮೃತ್ ರಾಜ್, ವಿಶ್ವ ಹಿಂದೂ ಪರಿಷತ್ ನ ಮುಖಂಡರಾದ ರಮೇಶ್,ಸಂತೋಷ್ ವಿನೂತ,ನವ್ಯ,ಕೃತ್ತಿಕಾ,ಅಮೃತಾಸದಾಶಿವ,ಸಂಧ್ಯಾ ನಾಣಿ,
ಭಜನಾ ಮಡಳಿ ಲತಾರಮೇಶ್ ,ಪದ್ಮ ಹಾಗೂ
ಕಾವ್ಯ,ರೇಖಾ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!