ಕುಶಾಲನಗರ, ಜು 23: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಜರಾಯಪಟ್ಟಣ ಗ್ರಾಮದ ದಾಸವಾಳ ಗುಳಿಗ ಪೈಸಾರಿ ಭಾಗದಲ್ಲಿರುವ ದೇವಕಿ, ಕೇಶವ, ಆದಿಲಕ್ಷ್ಮಿ ರವರ ಮನೆ ಕಡೆಗೆ ಹಾದು ಹೋಗುವ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಅಂದಾಜು ರೂ.2,00,000 ರೂಗಳ ಕಾಮಗಾರಿಗೆ ಚಾಲನೆ ನೀಡಲಾಯಿತು. ಸದರಿ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ. ಎಲ್. ವಿಶ್ವ ಮತ್ತು ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಸಮೀರ, ಜಾಜಿ ರವರು ಸ್ಥಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಜರಿದ್ದರು.
Back to top button
error: Content is protected !!