ಕಾರ್ಯಕ್ರಮ

ಬಾಳೆಗುಂಡಿ ಹಾಡಿಯಲ್ಲಿ ಬಾಲ್ಯ ವಿವಾಹ ನಿಷೇಧ, ಪೊಕ್ಸೋ ಕಾಯ್ದೆ ಮಾಹಿತಿ ಕಾರ್ಯಗಾರ.

ಕುಶಾಲನಗರ, ಜು. 21: ನಂಜರಾಯಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಬಾಳೆಗುಂಡಿ ಯಲ್ಲಿ ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆಯ ಮಾಹಿತಿ ಕಾರ್ಯಕ್ರಮವನ್ನು ಹಾಡಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಸೋಮವಾರಪೇಟೆ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಪರಮೇಶ್ ಕುಮಾರ್ ನೆರವೇರಿಸಿ ಜನಸಂಖ್ಯಾ ಸ್ಪೋಟದಿಂದಾಗುವ ದುಷ್ಪರಿಣಾಮಗಳು,ಬಾಲ್ಯ ವಿವಾಹ ನಿಷೇಧ, ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆಯ ಬಗ್ಗೆ, ಪೊಕ್ಸೋ ಕಾಯ್ದೆಯ ಬಗ್ಗೆ ಹಾಡಿನ ಜನರಿಗೆ ಅರಿವು ಮೂಡುವಂತೆ ಸವಿಸ್ತಾರವಾಗಿ ಮಾತಾನಾಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿನವರು ಹಾಡಿ ಗಳಲ್ಲಿ ಶಿಶು ಮರಣಕ್ಕೆ ಕಾರಣಗಳು, ಸಿಕಲ್ ಸೆಲ್ ರಕ್ತ ಹೀನತೆ ತಪಾಸಣೆ, ಮತ್ತು ಉಚಿತ ಚಿಕಿತ್ಸೆ, ಗೃಹ ಆರೋಗ್ಯ ಕಾರ್ಯಕ್ರಮದಡಿಯಲ್ಲಿ 14. ಕಾಯಿಲೆಗಳ ಉಚಿತ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ಬಗ್ಗೆ, ತಂಬಾಕಿನ ದುಷ್ಪರಿಣಾಮಗಳ ಬಗ್ಗೆ, ಮಾಹಿತಿಯನ್ನು ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲ್ಲೂಕು ಮೇಲ್ವಿಚಾರಕಿ ಸಾವತ್ರವ್ವ , ಗರ್ಭಿಣಿಯರಿಗೆ ಮಾತೃವಂದನ ಮತ್ತು ಭಾಗ್ಯಲಕ್ಷಿ ಬಗ್ಗೆ ಇಲಾಖೆಯ ಮಾಹಿತಿ ನೀಡಿದರು.
ಮಕ್ಕಳ ಸಹಾಯವಾಣಿ ವತಿಯಿಂದ ಮಧು ಮತ್ತು ದಮಯಂತಿ ಮಕ್ಕಳ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭಗಳಲ್ಲಿ ಅಭಿವೃದ್ಧಿ ಅಧಿಕಾರಿ ಮೇದಪ್ಪ, ಆರೋಗ್ಯ ಕೇಂದ್ರದ ನೀಲಮ್ಮ, ಪುನೀತ್, ಮಂಜುನಾಥ, ಪ್ರೇಮ, ರೇಷ್ಮಾ ಸೇರಿದಂತೆ ಆಶಾ ಕಾರ್ಯಕರ್ತೆ ಯರು, ಭಾಗವಹಿಸಿದರು. ಇದೇ ಸಂದರ್ಭದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ಈ ಸಂದರ್ಭ ಹಾಡಿಯ ಪ್ರಮುಖರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!