ಕುಶಾಲನಗರ, ಮೇ 22: ಕೇರಳದ ಕೋಜಿಕೋಡ್ ನಲ್ಲಿ GAMMA ಹಾಗೂ IMMAF ವತಿಯಿಂದ ಆಯೋಜಿಸಿದ್ದ ರಾಷ್ಟ್ರಮಟ್ಟದ ಮಿಕ್ಸ್ಡ್ ಮಾರ್ಷಿಯಲ್ ಆರ್ಟ್ಸ್ ನಲ್ಲಿ ಕೊಡಗಿನ ಕೂರ್ಗ್ ಕೊಂಬಾಟ್ ಕ್ಲಬ್ (C3MMA)ಯ ಕ್ರೀಡಾಪಟುಗಳು ಬಾಗವಹಿಸಿದ್ದು ಮುಳ್ಳುಸೋಗೆಯ ವರುಣ್ ಎಂ.ಸಿ. ಕಂಚಿನ ಪದಕ ಗೆದ್ದಿದ್ದು, ಕೊಪ್ಪದ ವೇಣು ವರ್ಧನ್ ಚಿನ್ನದ ಪದಕ ಗೆಲ್ಲುವ ಮೂಲಕ ಥೈಲ್ಯಾಂಡ್ ನಲ್ಲಿ ನಡೆಯಲಿರುವ ೨೦೨೪ರ ಸಾಲಿನ GAMMA ಏಷ್ಯನ್ ಮಿಕ್ಸ್ಡ್ ಮಾರ್ಷಿಯಲ್ ಆರ್ಟ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿಬಿಂಬಿಸಲು ಆಯ್ಕೆ ಆಗಿದ್ದಾರೆ.
ಇನ್ನೊಬ್ಬ ಕ್ರೀಡಾರ್ಥಿಯಾದ ಶಾಫಿ ಉತ್ತಮವಾದ ಪ್ರದರ್ಶನ ಮೆರೆದಿದ್ದು ಕೆಲವೆ ಅಂಕಗಳೊಂದಿಗೆ ಗೆಲುವನ್ನು ಪಡೆದುಕೊಳ್ಳುವುದರಲ್ಲಿ ವಿಪಲರಾಗಿದ್ದಾರೆ.
ಈ ಮೂರು ಕ್ರೀಡಾರ್ಥಿಗಳು ಬಹಳ ಶ್ರಮ ಹಾಗೂ ನಿಷ್ಠೆಯಿಂದ ತಾಲಿಮು ನಡೆಸುತ್ತಾ ಉತ್ತಮ ತರಬೇತಿಯನ್ನು ಪಡೆಯುತ್ತಿದ್ದು ಈ ಕ್ರೀಡೆಯಲ್ಲಿ ಮಹತ್ತರವಾದ ಸಾದನೆ ಮಾಡುವ ಸಂಕಲ್ಪ ಮಾಡಿದ್ದಾರೆ. ಜಿಲ್ಲೆಯ ನಾಗರೀಕರು ಬರಿ ಕ್ರಿಕೇಟ್ ಆಟಗಾರರನ್ನು ಪ್ರಶಂಶಿಸಿ ಪ್ರೋತ್ಸಾಹಿಸುವುದಲ್ಲದೆ ಇಂತಹ ಸಮರಕಲೆಯ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಬೆಂಬಲಿಸಿ ಬೆಳಕಿಗೆ ತರಬೇಕೆಂದು C3MMA ಯ ಕೋಚ್ ಆದ ಅಮಿತ್ ವಿಶ್ವನಾಥ್ ಕೇಳಿಕೊಂಡಿದ್ದಾರೆ.
Back to top button
error: Content is protected !!