
ಕುಶಾಲನಗರ, ಮೇ 10: ಸೂರ್ಲಬ್ಬಿ ಕೊಲೆ ಪ್ರಕರಣದ ವಿವರ:
ಮೃತ ಬಾಲಕಿ ಮೀನಾ ಹಾಗೂ ಆರೋಪಿ ಪ್ರಕಾಶನಿಗೂ ವಿವಾಹ ನಿಶ್ಚಿತಾರ್ಥ ಏರ್ಪಡಿಸಲಾಗಿತ್ತು. ಮಕ್ಕಳ ಸಹಾಯವಾಣಿ ಸಂಖ್ಯೆಗೆ ಮಾಹಿತಿ ನೀಡಲಾಗಿದೆ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆ ಸ್ಥಳಕ್ಕೆ ತೆರಳಿ ಕೌನ್ಸೆಲಿಂಗ್ ಮಾಡಿದೆ. ಆಕೆಗೆ 18 ವರ್ಷ ತುಂಬಿದ ಬಳಿಕ ಮದುವೆ ಮಾಡಲು ಸೂಚಿಸಲಾಗಿದೆ. ಮನೆಯವರು ಒಪ್ಪಿಕೊಂಡಿದ್ದರೂ ಆಕ್ರೋಷಗೊಂಡಿದ್ದ ಆರೋಪಿ ಪ್ರಕಾಶ್ (32 ವರ್ಷ), ಮೀನಾ (16 ವರ್ಷ D/O ಸುಬ್ರಮಣಿ) ಹತ್ಯೆಗೈದಿದ್ದಾನೆ.
ಸಂಜೆ 5:30ರ ಸುಮಾರಿಗೆ ಬಾಲಕಿಯರ ಮನೆಗೆ ತೆರಳಿದ ಆರೋಪಿ ಮೃತ ತಂದೆಯ ಮೇಲೆ ಹಲ್ಲೆ ನಡೆಸಿ ತಾಯಿಗೆ ಗಾಯಗೊಳಿಸಿ ಬಾಲಕಿಯನ್ನು 100 ಮೀ.ವರೆಗೆ ಎಳೆದೊಯ್ದು ಅಲ್ಲಿ ಆಕೆಯನ್ನು ಕತ್ತರಿಸಿ ತಲೆ ತೆಗೆದುಕೊಂಡು ಪರಾರಿಯಾಗಿದ್ದಾನೆ. ಆತನನ್ನು ಇನ್ನೂ ಬಂಧಿಸಬೇಕಿದೆ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೃತಮೀನಾಗೆ 3 ಸಹೋದರಿಯರು ಮತ್ತು 2 ಸಹೋದರರು ಇದ್ದಾರೆ. ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿಸಿದ್ದಾಳೆ.
Back to top button
error: Content is protected !!