ಕುಶಾಲನಗರ, ಆ 23: ಶಾಲೆಯಲ್ಲಿ ವಿದ್ಯಾರ್ಥಿಗಳು ಡಿಸ್ಕಸ್ ಥ್ರೋ ಅಭ್ಯಾಸ ನಡೆಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಅಡ್ಡ ಬಂದ ವಿದ್ಯಾರ್ಥಿಯೊಬ್ಬರ ತಲೆಗೆ ಬಡಿದು ಗಂಭೀರವಾಗಿ ಘಾಸಿಗೊಂಡ ಘಟನೆ ನಂಜರಾಯಪಟ್ಟಣ ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
ವಿರುಪಾಕ್ಷಪುರ ಗ್ರಾಮದ ಶೇಖರ್ ಆಶಾ ದಂಪತಿಗಳ ಪುತ್ರ 8ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ಗಾಯಗೊಂಡ ವಿದ್ಯಾರ್ಥಿ. ತಲೆಗೆ ಘಾಸಿಗೊಂಡ ಹಿನ್ನೆಲೆಯಲ್ಲಿ ಪ್ರಜ್ವಲ್ ನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ.
Back to top button
error: Content is protected !!