ಕಾರ್ಯಕ್ರಮ

ಶಿವಕುಮಾರ ಸ್ವಾಮೀಜಿಗಳ 118ನೇ ಜನ್ಮದಿನ: ರಕ್ತದಾನ ಶಿಬಿರ

ಸೋಮವಾರಪೇಟೆ, ಮಾ 24: ಶಿವಕುಮಾರ ಸ್ವಾಮೀಜಿಗಳ 118ನೇ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ರಕ್ತದಾನ ಶಿಬಿರ
ತಥಾಸ್ತು ಸಾತ್ವಿಕ ಸಂಸ್ಥೆ ನೇತೃತ್ವದಲ್ಲಿ ಅಬಕಾರಿ ಇಲಾಖೆ, ಬಿ.ಟಿ.ಸಿ.ಜಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಪಟ್ಟಣದ ಮಹಿಳಾ ಸಮಾಜದಲ್ಲಿ ನಡೆಯಿತು.
ತಹಶೀಲ್ದಾರ್ ಕೃಷ್ಣಮೂರ್ತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ರಕ್ತದಾನ ಬಹಳ ಶ್ರೇಷ್ಠವಾದ ದಾನವಾಗಿದೆ,ರಕ್ತ ನೀಡುವ ಮೂಲಕ ಮತ್ತೊಂದು ಜೀವವನ್ನು ಉಳಿಸುವ ಮಹತ್ತರವಾದ ಕಾರ್ಯಮಾಡಬಹುದಾಗಿದೆ ಎಂದರು.ಹಿಂದೆ ಅಪಘಾತ ಅಥವಾ ಶಸ್ತ್ರ ಚಿಕಿತ್ಸೆಯ ಸಂದರ್ಭ ರಕ್ತಕ್ಕಾಗಿ ಪರದಾಡಬೇಕಾಗಿತ್ತು ಆದರೆ ಇಂದು ಎಲ್ಲೆಡೆ ಬ್ಲಡ್ಡ್ ಬ್ಯಾಂಕ್ ಇರುವುದರಿಂದ ಸಕಾಲದಲ್ಲಿ ಸಿಗುತ್ತದೆ ಆದರೂ ಕೆಲವೊಮ್ಮೆ ವಿಶೇಷ ಗ್ರೂಪಿನ ರಕ್ತ ಸಿಗದೇ ಪರದಾಡುವಂತಹ ಸ್ಥಿತಿ ಇದೆ ಎಂದರು.ಶಿವಕುಮಾರ ಸ್ವಾಮೀಜಿಗಳ ಸ್ಮರಣಾರ್ಥ ರಕ್ತದಾನ ಶಿಬಿರ ಮಾಡುತಿರು ವುದು ಅಭಿನಂದನಾರ್ಹ ಕಾರ್ಯವೆಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆ ಕಿರಿಕೂಡ್ಲಿ ಮಠದ ಶ್ರೀ.ಸದಾಶಿವ ಸ್ವಾಮೀಜಿ ಮಾತನಾಡಿ ನೂರಾಹನ್ನೊಂದು ವರ್ಷಗಳ ಸಾರ್ಥಕ ಬದುಕು ಸವೆಸಿದ ಕಾಯಕಯೋಗಿ,ನಡೆದಾಡುವ ದೇವರು,ಕರ್ನಾಟಕ ರತ್ನ ,ಡಾ.ಶ್ರೀ. ಶಿವಕುಮಾರ ಸ್ವಾಮೀಜಿ ಜಯಂತಿಯ ಸ್ಮರಣಾರ್ಥ ನಾಡಿನಾದ್ಯಂತ ರಕ್ತ ದಾನ ಶಿಬಿರ ಸೇರಿದಂತೆ ಹಲವು ಸಾಮಾಜಿಕ ಸೇವೆಗಳು,ಕಾರ್ಯಗಳು ನಡೆಯುತ್ತಿವೆ ಎಂದರು.
ಮಹನಿಯರುಗಳ ಹೆಸರಿನಲ್ಲಿ ನಡೆಯುವ ಇಂತಹ ಶಿಬಿರಗಳು ಅವರ ಹೆಸರನ್ನು ಸಾರ್ಥಕ ಗೊಳಿಸುತ್ತದೆ ಎಂದರು.
ಶಿವಕುಮಾರ ಸ್ವಾಮೀಜಿ ಮಕ್ಕಳಲ್ಲಿ ದೇವರನ್ನು ಕಂಡವರು,ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ ಇಂದಿಗೂ ಮಠದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅದಿಕ ಮಂದಿ ತ್ರಿವಿಧ ದಾಸೋಹ ಆಶ್ರಯ ಪಡೆದಿದ್ದಾರೆ ಎಂದು ತಿಳಿಸಿದರು. ಇಂತಹ ಮಹಾನ್ ವ್ಯಕ್ತಿಯ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ ನಡೆಸುವ ಮೂಲಕ ಅವರ ಸ್ಮರಣೆಗೆ ಅವಕಾಶ ಕಲ್ಪಿಸಿದ ತಥಾಸ್ತು ಸಂಸ್ಥೆ ಹಾಗೂ ಅಬಕಾರಿ ಇಲಾಖೆಯ ಕಾರ್ಯ ಶ್ಲಾಘನೀಯವೆಂದರು.
ತಪೋ ಕ್ಷೇತ್ರ,ಮನೆಹಳ್ಳಿ ಮಠದ ಶ್ರೀ. ಮಹಾಂತ ಶಿವಲಿಂಗ ಸ್ವಾಮೀಜಿ,ಪಟ್ಟಣದ ವಿರಕ್ತ ಮಠದ ಶ್ರೀ. ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಅಬಕಾರಿ ಇಲಾಖೆ ನಿರೀಕ್ಷಕ ಲೋಕೇಶ್,ಮಹಿಳಾ ಸಮಾಜದ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ತಥಾಸ್ತು ಸಂಸ್ಥೆಯ ಅಧ್ಯಕ್ಷ ಉದಯ್ ಮಾಲ್,ಮಡಿಕೇರಿ ರಕ್ತನಿಧಿ ಘಟಕದ ವೈದ್ಯ ಡಾ.ಕರುಬಯ್ಯ, ಬಿ.ಟಿ.ಸಿ. ಜಿ. ಕಾಲೇಜು ಪ್ರಾಂಶುಪಾಲ ಶ್ರೀ ಹರ್ಷ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪತ್ರಕರ್ತ ಎಸ್.ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಥಾಸ್ತು ಸಂಸ್ಥೆಯ ಶಿವಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!