ಕುಶಾಲನಗರ, ಜ 31: ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ಇಂದು ಸರ್ಕಾರಿ ಪ್ರೌಢಶಾಲೆ ಬೆಟ್ಟದಪುರದ 9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಆಹಾರ, ಆರೋಗ್ಯ, ಸ್ವಚ್ಛತೆ ಹಾಗೂ ಫಿಟ್ನೆಸ್ ನ ತಿಳುವಳಿಕೆ ಮತ್ತು ಕಾರ್ಯಾಗಾರವನ್ನು ಕುಶಾಲನಗರ ” ನ್ಯೂಜೆನ್ ಫಿಟ್ನೆಸ್ ” ನ ಜಿಮ್ ನಲ್ಲಿ ಮತ್ತು “ಹೇರ್ 4 ಯು” ಬ್ಯುಟಿಪಾರ್ಲರ್ ನಲ್ಲಿ ನಡೆಸಿಕೊಡಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಅಧ್ಯಕ್ಷೆ ಜೆಸಿ ತೇಜ ದಿನೇಶ್ ಮಾತನಾಡಿ, ಹರೆಯದ ವಯಸ್ಸಿನಲ್ಲಿ ದೇಹದಲ್ಲಾಗುವ ಬದಲಾವಣೆಯ ಬಗ್ಗೆ, ಸ್ವಚ್ಛತೆ ಬಗ್ಗೆ ತಿಳಿಸಿದರು. ಕಾರ್ಯದರ್ಶಿ ಜೆಸಿ ಕಾವ್ಯ ಜಂಕ್ ಫುಡ್ ನ ದುಷ್ಪರಿಣಾಮ ಮತ್ತು ಆಹಾರದ ಮಹತ್ವದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ
ಜೋನ್ 14 ರ ಸಂಯೋಜಕರಾದ ಜೆಸಿ ರಜನಿಕಾಂತ್ ಎಮ್. ಜೆ.
ಝೆಡ್.ವಿ .ಪಿ ಜಗದೀಶ್ ಬಿ.
ಶಾಲೆಯ ಶಿಕ್ಷಕರಾದ ಮಮತಾ,ಗಾಯಿತ್ರಿ,ಟ್ರೈನರ್ ಜನನ್ ಹಾಗೂ 50 ಕ್ಕೂ ಹೆಚ್ಚು ಮಕ್ಕಳು ಈ ಕಾರ್ಯಾಗಾರದ ಪ್ರಯೋಜನ ಪಡೆದರು.
ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ಜಿಮ್ ಮಾಲೀಕರಾದ ಮಮತ ಪವನ್ ಮತ್ತು ಸಲೂನ್ ಮಾಲೀಕರಾದ ಶೈಲರವರು ಹಾಜರಿರುವುದರ ಜೊತೆಗೆ ಉಚಿತವಾಗಿ ಅವಕಾಶ ಕಲ್ಪಿಸಿಕೊಟ್ಟಿದ್ದು ಇವರಿಗೆ ವಿಶೇಷ ಧನ್ಯವಾದಗಳನ್ನು ಜೆಸಿ ಪದಾಧಿಕಾರಿಗಳು ಅರ್ಪಿಸಿದರು.
Back to top button
error: Content is protected !!