ಕುಶಾಲನಗರ, ಜ 26: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿರಚಿತ ಭಾರತದ ಸಂವಿಧಾನ ಇಡೀ ವಿಶ್ವದ ಸುಗಮ ಆಡಳಿತ ವ್ಯವಸ್ಥೆಯ ದಾರಿದೀಪವಾಗಿದೆ ಎಂದು ನಿವೃತ್ತ ಶಿಕ್ಷಣಾಧಿಕಾರಿ ಹೆಚ್.ಡಿ.ಮಂಜುನಾಥ್ ಆಶಿಸಿದರು.
ಕುಶಾಲನಗರದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮುಖ್ಯ ಭಾಷಣ ಮಾಡಿದ ಅವರು, ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಹತ್ತಾರು ಧರ್ಮಗಳು, ನೂರಾರು ಭಾಷೆಗಳು, ಭಿನ್ನ ವಿಭಿನ್ನ ಆಚಾರ – ವಿಚಾರ ಹಾಗೂ ಸಂಸ್ಕ್ರತಿಗಳು, ಸಾರ್ವಭೌಮ, ಸಮಾಜವಾದಿ ಹಾಗೂ ಜಾತ್ಯಾತೀತ ತತ್ವಗಳನ್ನು ಅಳವಡಿಸಿಕೊಳ್ಳಲು ಸಂವಿಧಾನ ಎಂಬುದು ಆತ್ಮವಾಗಿದೆ ಎಂದು ವಿಶ್ಲೇಷಿಸಿದರು.
ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಕಸಿದು ನಮ್ಮ ದೇಶವನ್ನು ನಾವು ಪಡೆದ ಮೇಲೆ ಈ ದೇಶವನ್ನು ಯಾರು ಆಳಬೇಕು ? ಹೇಗೆ ಆಳಬೇಕು ? ಎಂಬಿತ್ಯಾದಿ ಹತ್ತು ಹಲವು ಪ್ರಶ್ನೆಗಳಿಗೆ ಅಂದಿನ ದೂರದೃಷ್ಟಿ, ರಾಜತಾಂತ್ರಿಕ ನೈಪುಣ್ಯತೆ ಹೊಂದಿದ್ದ ಅನೇಕ ರಾಷ್ಟ್ರ ನಾಯಕರ ಅವಿರತ ಶ್ರಮದ ಫಲವಾಗಿ ಸಂವಿಧಾನ ರೂಪುಗೊಂಡ ಬಗೆಯನ್ನು ಮಂಜುನಾಥ್ ವಿಸ್ತ್ರತವಾಗಿ ವಿವರಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರೂ ಆದ ಕುಶಾಲನಗರ ತಾಲ್ಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಧ್ವಜಾರೋಹಣ ನೆರವೇರಿಸಿ ದಿನದ ಸಂದೇಶ ನೀಡಿದರು.
ಇದಕ್ಕೂ ಮುನ್ನಾ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಪೋಲೀಸ್, ಅಗ್ನಿಶಾಮಕ ದಳ, ಎನ್ ಸಿ ಸಿ, ಸ್ಟೂಡೆಂಟ್ ಪೋಲೀಸ್ ಕೆಡೆಟ್ ಮೊದಲಾದ ತಂಡಗಳಿಂದ ಆಕರ್ಷಕ ಕವಾಯತು ನಡೆಯಿತು.
ಪೊಲೀಸ್ ಉಪ ಅಧೀಕ್ಷಕ ಆರ್.ವಿ.ಗಂಗಾಧರಪ್ಪ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶ್ರೀನಿವಾಸ್, ವಲಯ ಅರಣ್ಯಾಧಿಕಾರಿ ರತನ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ತೋಟಗಾರಿಕಾ ಇಲಾಖೆ ಅಧಿಕಾರಿ ವರದರಾಜು, ಕುಶಾಲನಗರ ನಾಢ ಕಛೇರಿ ಕಂದಾಯ ಅಧಿಕಾರಿ ಸಂತೋಷ್, ಬಾಲಕಿಯರ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾ ಮೊದಲಾದವರಿದ್ದರು.
ಧ್ವಜಾರೋಹಣದ ಬಳಿಕ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.
ಬಾಲಕಿಯರ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಪುಷ್ಪಾ ಸ್ವಾಗತಿಸಿದರು. ಸಂಯುಕ್ತ ಪಿಯು ಕಾಲೇಜಿನ ಹೇಮಲತಾ ಹಾಗೂ ರಶ್ಮಿ ನಿರೂಪಿಸಿದರು.
ಮೂಕಾಂಬಿಕಾ ಪ್ರೌಢಶಾಲಾ ಮುಖ್ಯ ಶಿಕ್ಷಕ ಗೋಪಾಲ್ ವಂದಿಸಿದರು.
Back to top button
error: Content is protected !!