ಕ್ರೈಂ

ಮದುವೆಯಾಗುವುದಾಗಿ ನಂಬಿಸಿ‌ ಬಲಾತ್ಕಾರ: ಆರೋಪಿಗೆ ಶಿಕ್ಷೆ ಪ್ರಕಟ

ಕುಶಾಲನಗರ, ಮೇ 07: ಮಾಯಮುಡಿ ಗ್ರಾಮ ನಿವಾಸಿಯಾದ ಮಹಿಳೆಯ ಮೇಲೆ ಮಾಯಮುಡಿ ನಿವಾಸಿಯಾದ ಪುಟ್ಟರಾಜು ಎಂಬಾತನು ಮದುವೆಯಾಗುವುದಾಗಿ ನಂಬಿಸಿ ಹಾಗೂ ಬಲವಂತವಾಗಿ ಅತ್ಯಾಚಾರ ಮಾಡಿರುವ ಕುರಿತು ಪುಟ್ಟರಾಜು ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದಿನಾಂಕ: 30-03-2021 ರಂದು ದೂರು ಸ್ವೀಕರಿಸಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆ ಮೊ.ಸಂ: 49/2021, ಕಲಂ 376(2)(ಎನ್), 417 ಐ.ಪಿ.ಸಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.

ಸದರಿ ಪ್ರಕರಣದ ತನಿಖಾಧಿಕಾರಿಯಾದ ಶ್ರೀ ಎಂ.ಎನ್.ರಾಮರೆಡ್ಡಿ ಸಿಪಿಐ ಮತ್ತು ಶ್ರೀ ಎಸ್.ಎನ್.ಜಯರಾಮ್, ಸಿಪಿಐ, ಗೋಣಿಕೊಪ್ಪ ವೃತ್ತ ಹಾಗೂ ಸಹಾಯಾಕ ತನಿಖಾಧಿಕಾರಿಯಾದ ಶ್ರೀ ಅಬ್ದುಲ್ ಮಜೀದ್.ಕೆ.ಎ. ಹೆಚ್ ಸಿ-150 ರವರುಗಳು ಪ್ರಕರಣದ ಸಂಪೂರ್ಣ ತನಿಖೆಯನ್ನು ಕೈಗೊಂಡು ಆರೋಪಿ ಪುಟ್ಟರಾಜು ವಿರುದ್ಧ ದೋಷಾರೋಪಣ ಪತ್ರವನ್ನು ದಿ: 28-10-2021 ರಂದು ಮಾನ್ಯ 3 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ, ಮಡಿಕೇರಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಘನ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರಾದ ಶ್ರೀ. ಮಹಮ್ಮದ್ ಶೌಕತ್ ಆಲಿ ರವರು ಪ್ರಕರಣದ ವಿಚಾರಣೆಯನ್ನು ನಡೆಸಿ ವಾದ ಮಂಡಿಸಿರುತ್ತಾರೆ.

ದಿನಾಂಕ: 06/05/2024 ರಂದು ಸದರಿ ಪ್ರಕರಣದ ಆರೋಪಿ ಪುಟ್ಟರಾಜು.ಕೆ.ಎನ್, 32 ವರ್ಷ ಈತನಿಗೆ ಕಲಂ: 417 ಐಪಿಸಿ ಅಡಿಯಲ್ಲಿ 1 ವರ್ಷ ಜೈಲು ಶಿಕ್ಷೆ ಹಾಗೂ ರೂ. 2000/- ಗಳ ದಂಡ ಮತ್ತು ಕಲಂ: 376(2)(ಎನ್) ಐಪಿಸಿ ಅಡಿಯಲ್ಲಿ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ರೂ. 10,000/- ಗಳ ದಂಡವನ್ನು ವಿಧಿಸಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಜಿ.ಪ್ರಶಾಂತಿ ರವರು ತೀರ್ಪು ನೀಡಿರುತ್ತಾರೆ.

ಸದರಿ ಪ್ರಕರಣದ ತನಿಖಾಧಿಕಾರಿಗಳಾದ ಶ್ರೀ ಎಂ.ಎನ್.ರಾಮರೆಡ್ಡಿ ಸಿಪಿಐ ಮತ್ತು ಶ್ರೀ ಎಸ್.ಎನ್.ಜಯರಾಮ್, ಸಿಪಿಐ, ಗೋಣಿಕೊಪ್ಪ ವೃತ್ತ ಹಾಗೂ ಸಹಾಯಾಕ ತನಿಖಾಧಿಕಾರಿಯಾದ ಶ್ರೀ ಅಬ್ದುಲ್ ಮಜೀದ್.ಕೆ.ಎ. ಹೆಚ್ ಸಿ-150 ರವರುಗಳು ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆ ಮತ್ತು ಸರ್ಕಾರಿ ಅಭಿಯೋಜಕರಾದ ಶ್ರೀ ಮಹಮ್ಮದ್ ಶೌಕತ್ ಆಲಿ ರವರು ಸದರಿ ಮೇಲ್ಕಂಡ ಆರೋಪಿಯ ವಿರುದ್ಧ ಘನ ನ್ಯಾಯಾಲಯದಲ್ಲಿ ವಾದ ಮಂಡಿಸಿ ಕಠಿಣ ಜೈಲು ಶಿಕ್ಷೆಯನ್ನು ವಿಧಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆ.

ಶ್ರೀ ಎಂ.ಎನ್.ರಾಮರೆಡ್ಡಿ ಸಿಪಿಐ ಮತ್ತು ಶ್ರೀ ಎಸ್.ಎನ್.ಜಯರಾಮ್, ಸಿಪಿಐ, ಗೋಣಿಕೊಪ್ಪ ವೃತ್ತ ಹಾಗೂ ಸಹಾಯಾಕ ತನಿಖಾಧಿಕಾರಿಯಾದ ಶ್ರೀ ಅಬ್ದುಲ್ ಮಜೀದ್.ಕೆ.ಎ. ಹೆಚ್ ಸಿ-150 ರವರುಗಳು ಮತ್ತು ಸರ್ಕಾರಿ ಅಭಿಯೋಜಕರಾದ ಶ್ರೀ ಮಹಮ್ಮದ್ ಶೌಕತ್ ಆಲಿ ಹಾಗೂ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಜಿ.ಪ್ರಶಾಂತಿ, 3 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ, ಮಡಿಕೇರಿ ರವರಿಗೆ ಶ್ರೀ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಅಭಿನಂದಿಸಿರುತ್ತಾರೆ.

ಸಹಿ/-

Related Articles

Leave a Reply

Your email address will not be published. Required fields are marked *

Back to top button
error: Content is protected !!