ಸುದ್ದಿಗೋಷ್ಠಿ

ಜನಾಂಗ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ : ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯ

ಕುಶಾಲನಗರ, ಜ 25 : ಅರೆಭಾಷೆ ಒಕ್ಕಲಿಗ ಗೌಡ ಸಮುದಾಯದ ಮೇಲೆ ಕೀಳುಮಟ್ಟದ ಭಾಷೆಯನ್ನು ಉಪಯೋಗಿಸಿ ಸಮಾಜದಲ್ಲಿ ಶಾಂತಿ ಕದಡಲು ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ,ವಿಡಿಯೋಗಳನ್ನು ಹರಿಬಿಡುತ್ತಿದ್ದು,ಇಂತಹ ದುಷ್ಟ ಶಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೊಡಗು ಗೌಡ ಯುವ ವೇದಿಕೆ ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ ಒತ್ತಾಯಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅರೆಭಾಷೆ ಒಕ್ಕಲಿಗ ಗೌಡ ಜನಾಂಗದವರ ಮೇಲೆ
ನಿರಂತರವಾಗಿ ನಿಂದನೆಯ ಹೇಳಿಕೆಯುಳ್ಳ
ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ನಿನ್ನೆ ಮತ್ತೊಂದು ಆಡಿಯೋದಲ್ಲಿ ತಲಕಾವೇರಿಯ ಪ್ರಕೃತಿ ವಿಕೋಪದಲ್ಲಿ ಪ್ರಾಣ ಕಳೆದುಕೊಂಡವರ ವಿರುದ್ಧ ಕೂಡ
ದುಷ್ಕರ್ಮಿಗಳು ಆಡಿಯೋ ಮಾಡಿರುವುದು ದುರಂತವಾಗಿದೆ.
ದೇವಸ್ಥಾನದ ದರೋಡೆಕೋರ ಮತ್ತು ಒಂದು ಜನಾಂಗ ವಿರೋಧಿ ಎಂಬುದಾಗಿ ವ್ಯಂಗ್ಯವಾಗಿ ಅಪಹಾಸ್ಯ ಮಾಡಿ ವಿಕೃತಿ ಮೆರೆದಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು. ಇಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳದೆ ಹೋದರೆ ಕೊಡಗಿನಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಕೊಡಗು ಜಿಲ್ಲೆ ಒಂದು ಜನಾಂಗಕ್ಕೆ ಸೀಮಿತವಾದ ಜಿಲ್ಲೆಯಲ್ಲ, ಹಲವಾರು ಜನಾಂಗದವರು ಅನಾದಿಕಾಲದಿಂದಲೂ ಜೀವನ ಸಾಗಿಸುತ್ತ ಬಂದಿದ್ದಾರೆ.ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡರು ಕೊಡಗು ಮಾತ್ರವಲ್ಲದೆ ಸುಳ್ಯ, ಪುತ್ತೂರು, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕಿನಲ್ಲಿ ಐದು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ.ಜೊತೆಗೆ ರಾಜ್ಯ ಒಕ್ಕಲಿಗ ಗೌಡರ ಅವಿಭಾಜ್ಯ ಭಾಗವಾಗಿರುತ್ತದೆ. ಗುಡ್ಡೆಮನೆ ಅಪ್ಪಯ್ಯ ಗೌಡ, ಕೆದಂಬಾಡಿ ರಾಮಯ್ಯ ಗೌಡರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಈ ಸಮುದಾಯದ ಕೆಚ್ಚನ್ನು ಪ್ರದರ್ಶಿಸಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ರಾಜ್ಯಕ್ಕೆ ಮುಖ್ಯ ಮಂತ್ರಿಯನ್ನು ಈ ಸಮುದಾಯ ನೀಡಿದೆ. ಜನಾಂಗ ನಿಂದನೆ ಮಾಡುತ್ತಿರುವ ವಿಚಾರವನ್ನು ಕೆಎಸ್ಪಿ ತಂತ್ರಾಂಶ,ಐಜಿ ಮತ್ತು ಎಸ್ಪಿ ಅವರಿಗೆ ಸಾಕ್ಷಿ ಸಮೇತ ದೂರು ಸಲ್ಲಿಸಿದ್ದೇವೆ.ಪೊಲೀಸರು ಇಂತಹ ದುಷ್ಕರ್ಮಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು.ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ
ನಮ್ಮ ಎರಡು ಜಿಲ್ಲೆಯ ಸಂಘಟನೆಗಳು ಸೇರಿ ಬೆಂಗಳೂರಿನ ಒಕ್ಕಲಿಗ ಸಂಘದ ಸಹಯೋಗದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಮಾಡಲು ಚಿಂತನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಕೊಡಗು ಗೌಡ ಯುವಕ ಸಂಘ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಪದಾಧಿಕಾರಿಗಳಾದ
ಪಳಂಗೋಟು ವಿನಯ್ ಕಾರಿಯಪ್ಪ ,
ವಿವೇಕ್ ಕಡವಡಿರ, ನವೀನ್ ದೇರಳ ಭಾಗವಹಿಸಿದ್ದರು.

ಕುಶಾಲನಗರದಲ್ಲಿ ಶನಿವಾರ
ಕೊಡಗು ಗೌಡ ಯುವ ವೇದಿಕೆ ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ ಮಾತನಾಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!