ಕುಶಾಲನಗರ ಜ 21. ಕುಶಾಲನಗರ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ಕುಶಾಲನಗರ ಪುರಸಭೆ ವಾರ್ಡ್ ಗೆ ಸೀಮಿತವಾಗಿ ನಡೆದ ಐದನೇ ವರ್ಷದ ಜೈ ಭೀಮ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 15ನೇ ವಾರ್ಡಿನ ಸಹಾರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಎರಡನೇ ಸ್ಥಾನವನ್ನು ವಾರ್ಡ್ ನಂ.3 ಇಂದಿರಾ ಬಡಾವಣೆಯ ರಂಜಿತ್ ಫ್ರೆಂಡ್ಸ್ ತಂಡ ತನ್ನದಾಗಿಸಿತು . ಮೂರನೇ ಬಹುಮಾನವನ್ನು ಗೊಂದಿ ಬಸವನಹಳ್ಳಿ ಟೀಮ್ ಬ್ರದರ್ಸ್ ಪಡೆದರೆ, ನಾಲ್ಕನೇ ಬಹುಮಾನವನ್ನು ದಂಡಿನಪೇಟೆಯ ಚಾಲೆಂಜರ್ಸ್ ತಂಡ ಪಡೆಯಿತು. ಫೈನಲ್ ಪಂದ್ಯವು 6 ಓವರ್ ಗಳ ಪಂದ್ಯವಾಗಿತ್ತು ಟಾಸ್ ಗೆದ್ದಂತ ರಜಿತ ಫ್ರೆಂಡ್ಸ್ ತಂಡ ಬೌಲಿಂಗ್ ಅನ್ನು ಆಯ್ಕೆ ಮಾಡಿಕೊಂಡಿದ್ದು ಮೊದಲು ಬ್ಯಾಟ್ ಮಾಡಿದ ಸಹರಾ ತಂಡ ನಿಗದಿತ 6 ಓವರ್ ಗಳಿಗೆ. ಸಹರಾ ತಂಡದ ಆರಿಫ್ ರವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ 57 ರನ್ ಗುರಿ ಮುಟ್ಟಿತು ಇದನ್ನು ಬೆನ್ನಟ್ಟಿದ ರಜಿತ ಫ್ರೆಂಡ್ಸ್ ತಂಡ 40 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಫೈನಲ್ ಪಂದ್ಯದ ಪುರುಷೋತ್ತಮ ಸಾಹರ ತಂಡದ ಆರಿಫ್ ರವರು ಪಡೆದರು. ಉತ್ತಮ ಬ್ಯಾಟ್ಸ್ ಮ್ಯಾನ್ ಆಗಿ ಟೀಮ್ ಬ್ರದರ್ಸ್ ತಂಡದ ಯೂನಿಸ್ ಪಡೆದರು. ಉತ್ತಮ ಆಲ್ ರೌಂಡರ್ ರಜಿತ್ ಫ್ರೆಂಡ್ಸ್ ತಂಡದ ಶರಣ್ ಪಡೆದರು. ಉತ್ತಮ ಬೌಲರ್ ಆಗಿ ಸಹರ ತಂಡದ ಆರಿಫ್ ಪಡೆದರೆ ಉತ್ತಮ ವಿಕೆಟ್ ಕೀಪರ್ ಆಗಿ ಸಂತೋಷ್ ಪಡೆದರು. ಇದೇ ಸಂದರ್ಭದಲ್ಲಿ ಬಹುಮಾನ ವಿತರಣೆಯನ್ನು ಸೆನ್ಸಾ ತಂಡದ ಮಾಲೀಕ ಸೈಜನ್ ಪೀಟರ್. ನಾಣಿ. ರಂಜನ ಹೆಬ್ಬಾಲೆ ಇರ್ಫಾನ್. ಭಾಷಾ. ಫಯಾಜ್. ನರೇಂದ್ರ. ಕ್ರೀಡಾಕೂಟದ ವ್ಯವಸ್ಥಾಪಕ ಮಹದೇವ್ ನೆರವೇರಿಸಿದರು
Back to top button
error: Content is protected !!