ಅರಣ್ಯ ವನ್ಯಜೀವಿ

ಹಾರಂಗಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಕಾಡಾನೆ ಸಂಚಾರ

ಕುಶಾಲನಗರ, ಜ. 19: ಯಡನವಾಡು ಮೀಸಲು ಅರಣ್ಯ ಪ್ರದೇಶದಿಂದ ಬಂದ ಕಾಡಾನೆ ಹಗಲು ವೇಳೆಯಲ್ಲಿ ಹಾ ರಂಗಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಈಜಿಕೊಂಡು ಅತ್ತೂರು ಮೀಸಲು ಅರಣ್ಯದತ್ತ ತೆರಳಿದ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಯಡನವಾಡು ಮೀಸಲು ಅರಣ್ಯ ಪ್ರದೇಶದಿಂದ ಬಂದ ಒಂಟಿ ಸಲಗ ಹಾರಂಗಿ ಸಾಕಾನೆ ಶಿಬಿರ ಹಾಗೂ ವಾಟರ್ ಸ್ಪೋರ್ಟ್ ಸಮೀಪದಲ್ಲೇ ಹಾದು ಹೋಗಿದ್ದು
ಹಿನ್ನೀರಿನಲ್ಲಿ ಒಂದು ಕಿಲೋಮೀಟರ್ ನಷ್ಟು ದೂರದವರೆಗೆ ಈಜಿಕೊಂಡು ಅತ್ತೂರು ಮೀಸಲು ಅರಣ್ಯಕ್ಕೆ ತೆರಳಿದೆ. ಈ ಭಾಗದಲ್ಲಿ ಆಗಿಂದಾಗ್ಯೆ ಕಾಡಾನೆ ಸಂಚಾರ ಕಂಡುಬರುತ್ತಿದ್ದು ಅಣೆಕಟ್ಟೆ ಆವರಣಕ್ಕೆ ಲಗ್ಗೆಯಿಟ್ಟು ಪ್ರವಾಸಿಗರಲ್ಲಿ ಆತಂಕ ಮೂಡಿಸಿದ್ದ ಪ್ರಕರಣ ಕೂಡ ನಡೆದಿರುವುದು ಸ್ಮರಿಸಬಹುದು.

Related Articles

Leave a Reply

Your email address will not be published. Required fields are marked *

Back to top button
error: Content is protected !!