ಸಿದ್ದಾಪುರ, ಮಾ 18: ಮನೆಯ ಮೇಲೆ ಬಿದ್ದ ಬೃಹತ್ ಮರ, ಮನೆಯವರು ಪ್ರಾಣಪಾಯದಿಂದ ಪಾರಾದ ಘಟನೆ
ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ಜ್ಯೋತಿನಗರದಲ್ಲಿ ನಡೆದಿದೆ.
ಇಂದು ಸಂಜೆ ಸುರಿದ ಮಳೆಗೆ ಜ್ಯೋತಿನಗರದಲ್ಲಿ ಬೃಹದಾಕಾರದ ಮರವೊಂದು ಇಲ್ಲಿನ ನಿವಾಸಿ ಪರಮೇಶ ಎಂಬುವವರ ಮನೆಯ ಮೇಲೆ ಬಿದ್ದಿದೆ. ಮರ ಬೀಳುವ ಸಂಧರ್ಭದಲ್ಲಿ ಮನೆಯ ಒಳಗೆ ಪರಮೇಶ,ಆತನ ಮಡದಿ ಸೇರಿದಂತೆ ಮೂವರು ಇದ್ದರು.ಮರ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ.ಅಲ್ಲದೆ ಮನೆಯಲ್ಲಿದ್ದವರಿಗೂ ಸಣ್ಣಪುಟ್ಟ ಗಾಯವಾಗಿದೆ. ಸ್ಥಳಕ್ಕೆ ಗ್ರಾ.ಪಂ ಸದಸ್ಯ ಗಣೇಶ್ ಭೇಟಿನೀಡಿ ಪರಿಶೀಲಿಸಿದ್ದಾರೆ.ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ಅಲ್ಪಸಮಯ ವಾಹನ ಸಂಚಾರ ಸ್ಥಗಿತಗೊಂಡಿತ್ತು.
Back to top button
error: Content is protected !!