ಕುಶಾಲನಗರ, ಅ 30: ಕುಶಾಲನಗರ ತಾಲೂಕು ವ್ಯಾಪ್ತಿಯ ವಾಲ್ನೂರು-ತ್ಯಾಗತ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ರೂ 1 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಗ್ರಾಮದ ಭಗವತಿ ದೇವಾಲಯ ಮುಂಭಾಗ ಸಾಂಕೇತಿಕವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ರೂ
25 ಲಕ್ಷ ವೆಚ್ಚದಲ್ಲಿ ಬಾಳೆಗುಂಡಿ ಗಿರಿಜನ ಹಾಡಿ ರಸ್ತೆ ಅಭಿವೃದ್ಧಿ, 5 ಲಕ್ಷ ವೆಚ್ಚದಲ್ಲಿ ಕಾಲುಸೇತುವೆ, 2 ಲಕ್ಷ ವೆಚ್ಚದಲ್ಲಿ ಅಂಗನವಾಡಿ ದುರಸ್ಥಿ ಕಾಮಗಾರಿ, 10 ಲಕ್ಷ ವೆಚ್ಚದಲ್ಲಿ ತ್ಯಾಗತ್ತೂರಿನ ದಿ.ಆನಂದ ಮನೆ ಕಡೆಗೆ ರಸ್ತೆ ಅಭಿವೃದ್ಧಿ, 10 ಲಕ್ಷ ವೆಚ್ಚದಲ್ಲಿ ಮಸೀದಿ ಬಳಿಯ ಎ.ಎಂ.ಹಸೈನಾರ್ ಮನೆ ಕಡೆ ರಸ್ತೆ ಅಭಿವೃದ್ಧಿ, 4.5 ಲಕ್ಷ ವೆಚ್ಚದಲ್ಲಿ ಗೋಣಿಕೆರೆ ಕುಟುಂಬ ರಸ್ತೆ ಅಭಿವೃದ್ಧಿ, ರೂ 2 ಲಕ್ಷ ವೆಚ್ಚದಲ್ಲಿ ತ್ಯಾಗತ್ತೂರು ಅಂಗನವಾಡಿ ದುರಸ್ಥಿ, 5 ಲಕ್ಷ ವೆಚ್ಚದಲ್ಲಿ ಗಿರಿಜನ ಹಾಡಿ ರಸ್ತೆ ಅಭಿವೃದ್ಧಿ, 10 ಲಕ್ಷ ವೆಚ್ಚದಲ್ಲಿ ಜ್ಯೋತಿ ನಗರ ಅಬ್ದುಲ್ಲಾ ಮನೆ ಹತ್ತಿರ ತಡೆಗೋಡೆ ಕಾಮಗಾರಿಗಳು ಒಳಗೊಂಡಿದೆ. ಕೂಡಲೆ ಈ ಕಾಮಗಾರಿಗಳು ಆರಂಭಗೊಳ್ಳಲಿದೆ.
ಅಲ್ಲದೆ 11 ಲಕ್ಷ ವೆಚ್ಚದಲ್ಲಿ ತ್ಯಾಗತ್ತೂರಿನ ಭಗವತಿ ದೇವಸ್ಥಾನ ರಸ್ತೆ ಅಭಿವೃದ್ಧಿ, 10 ಲಕ್ಷ ವೆಚ್ಚದಲ್ಲಿ ಪುರಂದರ ಮನೆ ಕಡೆ ರಸ್ತೆ ಅಭಿವೃದ್ಧಿ, ವಾಲ್ನೂರು-ಅಭ್ಯತ್ ಮಂಗಲದಲ್ಲಿ 10 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೆ
ರೂ 31 ಲಕ್ಷ ವೆಚ್ಚದ ಯೋಜನೆಗೆ ಟೆಂಡರ್ ಆಗಿದ್ದು ಶೀಘ್ರದಲ್ಲೇ ಈ ಕಾಮಗಾರಿಗಳು ಕೂಡ ಚಾಲನೆಗೊಳ್ಳಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್, ಜಿಲ್ಲಾ ಕೆಡಿಪಿ ಸದಸ್ಯೆ ಸುನಿತಾ ಮಂಜುನಾಥ್, ತಾಲೂಕು ಕೆಡಿಪಿ ಸದಸ್ಯ ಎ.ಎಂ.ಹನೀಫ್,
ಗ್ರಾಪಂ ಅಧ್ಯಕ್ಷೆ ಮಂಜುಳಾ, ಸದಸ್ಯ ಮನುಮಹೇಶ್, ಭಗವತಿ ದೇವಸ್ಥಾನ ಸಮಿತಿ ಅಧ್ಯಕ್ಷ ಮುಂಡ್ರುಮನೆ ಶಿವಕುಮಾರ್, ದೇವಸ್ಥಾನ ತಕ್ಕರಾದ ಅಚ್ಚಯ್ಯ, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ಕಾಂಗ್ರೆಸ್ ಮುಖಂಡ ಮುಂಡ್ರುಮನೆ ಸುದೇಶ್ ಕುಮಾರ್, ಪಿಡಿಒ ಮಾದಪ್ಪ ಮತ್ತಿತರರು ಇದ್ದರು.
Back to top button
error: Content is protected !!