ಕುಶಾಲನಗರ, ಅ 18: ಕುಶಾಲನಗರ ತಾಲೂಕಿನ ಮಸಗೋಡು-ಯಲಕನೂರು-ಕಣಿವೆ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ 15 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ತಿಳಿಸಿದರು.
ಹಾರಂಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಈ ಮಾರ್ಗ ಹದಗೆಟ್ಟಿದ್ದು ಈ ವ್ಯಾಪ್ತಿಯ 12 ಗ್ರಾಮಗಳ ನಿವಾಸಿಗಳಿಗೆ ತೀವ್ರ ಅನಾನುಕೂಲ ಉಂಟಾಗಿತ್ತು. ಇದೀಗ ಸರಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಅನುಮೋದನೆಗೊಂಡಿದ್ದು ರಸ್ತೆ ಅಭಿವೃದ್ಧಿಗೆ ರೂ 15 ಕೋಟಿ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು. ಈ ಭಾಗದಲ್ಲಿ ಕ್ವಾರಿಗಳಿದ್ದು ಶೀಘ್ರದಲ್ಲೇ ಟೆಂಡರ್ ಕರೆದು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.
ಅತಿವೃಷ್ಠಿಯಿಂದ ಹಲವು ಕಡೆ ರಸ್ತೆಗಳು ಹಾಳಾಗಿದ್ದು ಅವುಗಳನ್ನು ಕೂಡ ದುರಸ್ಥಿಗೊಳಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಹೊಸಳ್ಳಿ ಭಾಗದ ಕಾಂಗ್ರೆಸ್ ಮುಖಂಡ ಸತೀಶ್, ರತನ್, ಕೂಡಿಗೆ ಗ್ರಾಪಂ ಸದಸ್ಯ ಅನಂತ್ ಮತ್ತಿತರರು ಇದ್ದರು.
Back to top button
error: Content is protected !!