ಕಾರ್ಯಕ್ರಮ

ಕುಶಾಲನಗರದಲ್ಲಿ ಕೇರಳ ಸಮಾಜದಿಂದ ಓಣಂ ಆಚರಣೆ

ಕುಶಾಲನಗರ, ಅ 06 : ಓಣಂ ಆಚರಣೆ ಅದೊಂದು ಹಿಂದೂ ಸಂಸ್ಕ್ರತಿಯನ್ನು ಮೇಳೈಸುವ ಸುಂದರ ಆಚರಣೆ ಎಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.

ಕುಶಾಲನಗರದ ಕೇರಳ ಸಮಾಜದ ವತಿಯಿಂದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಓಣಂ ಆಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇರಳೀಯರ ಸಂಸ್ಕ್ರತಿ ಸಂಪ್ರದಾಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ಒಯ್ಯುವ ಆಚರಣೆ ಬಗ್ಗೆ ರಂಜನ್ ಶ್ಲಾಘಿಸಿದರಲ್ಲದೇ ಇಂದಿನ ಪೀಳಿಗೆಯ ಮಕ್ಕಳು ಗುರು ಹಿರಿಯರು ಹಾಗೂ ಪೋಷಕರಿಗೆ ಗೌರವ ಸಲ್ಲಿಸುವ ಸಂಸ್ಕ್ರತಿಯೊಂದಿಗೆ ವಿದ್ಯಾವಂತರಾಗಿ ದೇಶಕ್ಕೆ ಗೌರವ ತನ್ನಿ ಎಂದು ಕರೆಕೊಟ್ಟರು.

ಹಿಂದೂ ಮಲೆಯಾಳಿ ಸಮಾಜದ ಕೊಡಗು ಜಿಲ್ಲಾಧ್ಯಕ್ಷ ವಿ.ಎಂ.ವಿಜಯ್ ಮಾತನಾಡಿ, ಕಳೆದು ಹೋಗುತ್ತಿರುವ ಹಿಂದೂ ಸಂಸ್ಕ್ರತಿ ಸಂಪ್ರದಾಯಗಳನ್ನು ಜೋಪಾನ ಮಾಡುವ ಹೊಣೆಗಾರಿಕೆ ಬಗ್ಗೆ ಮಹಿಳೆಯರಿಗೆ ಮನವರಿಕೆ ಮಾಡಿದರು.

ಸಮಾಜದ ಅಧ್ಯಕ್ಷ ರವೀಂದ್ರನ್ ಅಧ್ಯಕ್ಷತೆ ವಹಿಸಿದ್ದರು

ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಮುರುಳಿಧರ್,
ಮಡಿಕೇರಿ ಎಸ್ಎನ್ ಡಿ ಪಿ ಅಧ್ಯಕ್ಷ ಹರೀಶ್ ಕುಮಾರ್, ವಾಸು,
ಕೇರಳ ಸಮಾಜದ ಉಪಾಧ್ಯಕ್ಷ ಕೆ.ಬಾಬು, ಕಾರ್ಯದರ್ಶಿ ರಾಬಿನ್, ನಿರ್ದೇಶಕರಾದ ರಾಯ್,
ಎಂ.ಜೆ.ಪ್ರಕಾಶ್, ಸುಶೀಲಾ, ಎಂ.ಎಸ್. ಶಾಂತಿ, ಆನಂದ್,ರಂಜಿತ್ ಕುಮಾರ್, ಧನರಾಜ್, ಅಜಿತ ಧನರಾಜ್ ಇದ್ದರು.

ಕಾರ್ಯಕ್ರಮಕ್ಕೂ ಮುನ್ನಾ ಕೇರಳ ಸಮಾಜದ ಸ್ಥಾಪಕ ಅಧ್ಯಕ್ಷ ಕೆ.ಶಿವಾನಂದನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದ ಓಣಂ ಸದ್ಯಕ್ಕೆ ಧನಸಹಾಯ ಮಾಡಿದ ದಾನಿಗಳು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀಷಾ ಪ್ರೀತಂ ನಿರೂಪಿಸಿದರು.
ಶ್ರೀಜಾ ಪ್ರಾರ್ಥಿಸಿದರು.
ಕೆ.ವರದ ಸ್ವಾಗತಿಸಿದರು.
ಮಾವೇಲಿ ವೇಷಧಾರಿಯಾಗಿ ಕಣ್ಣೂರಿನ ರಾರೀಶ್ ಗಮನ ಸೆಳೆದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!