ಮನವಿ

ಬೆಂಗಳೂರಿನ‌ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಸಮಸ್ತ ವೃತ್ತಿ ಬಾಂಧವರು ಪಾಲ್ಗೊಳ್ಳಲು ಮನವಿ

ಕುಶಾಲನಗರ, ಆ 10: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು, ಜಿಲ್ಲಾ ಘಟಕ ಕೊಡಗು ವತಿಯಿಂದ ರಾಜ್ಯ ಸಂಘದ ನಿರ್ದೇಶನದಂತೆ ದಿನಾಂಕ 12-8-2024 ಸೋಮವಾರದಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಒಂದು ದಿನದ ಮುಷ್ಕರದಲ್ಲಿ ಜಿಲ್ಲೆಯ ಸಮಸ್ತ ವೃತ್ತಿ ಬಾಂದವರು ತಮ್ಮ ಹಕ್ಕು ಬಾಧ್ಯತೆಗಳನ್ನು ಪಡೆಯುವ ಸಲುವಾಗಿ ಪಾಲ್ಗೊಳ್ಳಲು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.

ಪ್ರಮುಖ ಬೇಡಿಕೆಗಳು:- *2016ಕ್ಕಿಂತ ಮೊದಲು ನೇಮಕಾತಿ ಹೊಂದಿರುವ ಅರ್ಹ ಶಿಕ್ಷಕರನ್ನು ಪ್ರೌಢಶಾಲೆಗೆ ಬಡ್ತಿಗೆ ಪರಿಗಣಿಸುವುದು*
*ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕಾಲಕಾಲಕ್ಕೆ ನಿಯಮಾನುಸಾರ ಮುಖ್ಯ ಶಿಕ್ಷಕರಾಗಿ ಬಡ್ತಿ ನೀಡುವುದು*
*2017ರ ಒಳಗೆ ನೇಮಕಗೊಂಡ 1 ರಿಂದ 7ನೇ ತರಗತಿಯ ಶಿಕ್ಷಕರೆಂದು ಪರಿಗಣಿಸುವುದು.ಹೊಸ ವೃಂದ ಮತ್ತು ನೇಮಕಾತಿ ನಿಯಮಗಳು 2017 ರ ನಂತರ ನೇಮಕಗೊಂಡ ಶಿಕ್ಷಕರಿಗೆ ಅನ್ವಯಮಾಡುವುದು,ಯಾವುದೇ ನಿಯಮಗಳು ಜಾರಿಗೆ ಬಂದಲ್ಲಿ ಅವು ಜಾರಿ ಬಂದ ದಿನದಿಂದ ಅನ್ವಯಿಸುತ್ತವೆ ಆದರೆ ನಮ್ಮ ಇಲಾಖೆಯು ಪೂರ್ವಾನ್ವಯ ಮಾಡಿರುವುದು ಹಾಸ್ಯಾಸ್ಪದವಾಗಿದ್ದು ನಮ್ಮ ಶಿಕ್ಷಕರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತಿದ್ದು 20,25,30 ವರ್ಷಗಳ ಸೇವೆ ಸಲ್ಲಿಸಿದರೂ ಯಾವುದೇ ಬಡ್ತಿ ಇಲ್ಲದೇ ನಿರ್ಗಮಿಸುತ್ತಿರುವುದು ನಮ್ಮ ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ಎಂಬುದು ವಿಪರ್ಯಾಸವಾಗಿದೆ.ಬೇರೆ ಇಲಾಖೆಗಳಲ್ಲಿ ಓರ್ವ ಡಿ ದರ್ಜೆಯ ನೌಕರ ಹಂತ ಹಂತವಾಗಿ ದ್ವಿತೀಯ ದರ್ಜೆ, ಪ್ರಥಮ ದರ್ಜೆ, ಸೂಪರಿಂಟೆಂಡೆಂಟ್, ವ್ಯವಸ್ಥಾಪಕರು, ಹೀಗೆ ಮೇಲ್ದರ್ಜೆಗೆ ಏರಿದರೆ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರು ನೇಮಕವಾದಾಗ 1 ರಿಂದ 7 ನೇ ತರಗತಿಯವರೆಗೆ ಭೋದನೆ ಮಾಡುವ ಆದೇಶ ನೀಡಿ ಇದೀಗ. 1 ರಿಂದ 5 ನೇ ತರಗತಿಯವರೆಗೆ (PST)ಪಾಠ ಮಾಡಿ ಎಂದು ಹಿಂಬಡ್ತಿ ನೀಡಿರುವುದು ಮತ್ತು ಇನ್ನೂ ನೇಮಕವಾಗದ 6 ರಿಂದ 8 (GPT) ತರಗತಿಯ ಶಿಕ್ಷಕರಿಗೆ ಸ್ಥಳ ಕಾಯ್ದಿರಿಸಿ ವರ್ಗಾವಣೆ ಸಮಯದಲ್ಲಿ ಅನ್ಯಾಯ ಮಾಡಿರುವುದನ್ನು ಖಂಡಿಸಿ ದಿನಾಂಕ 12 -8-2024 ಸೋಮವಾರದಂದು ಇಡಿ ರಾಜ್ಯದ ಶಿಕ್ಷಕರು ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದು ಅಂತೆಯೇ ನಮ್ಮ ಜಿಲ್ಲೆಯ ಶಿಕ್ಷಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು ‌ಮಡಿಕೇರಿ,ವಿರಾಜಪೇಟೆ, ಸೋಮವಾರಪೇಟೆ ತಾಲ್ಲೂಕಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮತ್ತು ‌ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ತೆಗೆದುಕೊಂಡು ನ್ಯಾಯಯುತ ಬೇಡಿಕೆ ಈಡೇರಿಕೆಗೆ ಪಾಲ್ಗೊಳ್ಳುತ್ತಿದ್ದು ಸೋಮವಾರದಂದು ಇಡೀ ಜಿಲ್ಲೆಯ ಶಿಕ್ಷಕರು ತರಗತಿಗೆ ಸಾಮೂಹಿಕ ಸಾಂದರ್ಭಿಕ ರಜೆ ಹಾಕಿ ಗೈರುಹಾಜರಾಗುವ ಮುಖೇನ ಸಂಪೂರ್ಣ ಬೆಂಬಲ ನೀಡಬೇಕಾಗಿ ಕರೆ ನೀಡುತ್ತೇವೆ.ಅಲ್ಲದೆ ಪೋಷಕರು ಮತ್ತು ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರು ಸದಸ್ಯರು ಗಳು ಕೂಡ ನಮಗೆ ಸಹಕರಿಸಬೇಕೆಂದು ಹೆಚ್ ಎನ್.ಮಂಜುನಾಥ್
ಅಧ್ಯಕ್ಷರು, ಕ.ರಾ.ಪ್ರಾ.ಶಾ.ಶಿಸಂಘ(ರಿ) ಕೊಡಗು ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!