ಕುಶಾಲನಗರ, ಆ 02: ತಾರೀಕು 8/8/2024 ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಶಾಲನಗರ ತಾಲ್ಲೂಕು ಘಟಕ, ಕುಶಾಲನಗರ ಹಾಗು ರೋಟರಿ ಸಂಸ್ಥೆ ಕುಶಾಲನಗರ ಅವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ಜೊತೆಗೆ ಕಣ್ಣು ಹಾಗೂ ಅಂಗಾಂಗಗಳ ದಾನದ ಬಗ್ಗೆ ಅರಿವಿನ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಶ್ವ ಅಂಗದಾನ ದಿನ *13 ಆಗಸ್ಟ್ 2024.* ಭಾರತದಲ್ಲಿ ಅಂಗದಾನದ ಬೇಡಿಕೆ ಹೆಚ್ಚಿದೆ ಆದರೆ ಅಂಗಗಳ ಪೂರೈಕೆ ಮಾತ್ರ ತೀರಾ ಕಡಿಮೆ ಇದರ ಪರಿಣಾಮವಾಗಿ ಅಗತ್ಯವಿರುವ ಅಂಗಾಂಗ ಸೂಕ್ತ ಸಿಗದಿರುವುದು ಅನೇಕ ರೋಗಿಗಳ ಸಾವಿಗೆ ಕಾರಣವಾಗುತ್ತಿದೆ. ಜೊತೆಗೆ ಅಂಗಾಂಗ ದಾನ ಬಗ್ಗೆ ಮಾಹಿತಿ ಹಾಗೂ ಅರಿವಿನ ಕೊರತೆ ಇದೆ.
ತಾರೀಕು 8 ಆಗಸ್ಟ್ ಗುರುವಾರ ಬೆಳಗ್ಗೆ 10:30ಕ್ಕೆ ರೋಟರಿ ಹಾಲಿನಲ್ಲಿ ಕಣ್ಣು ಮತ್ತು ಅಂಗಾಂಗ ದಾನದ ಬಗ್ಗೆ ಮಾಹಿತಿಯನ್ನು ಸರ್ಕಾರಿ ವೈದ್ಯಕೀಯ ಕಾಲೇಜು, ಮಡಿಕೇರಿ ಅವರ ಮೂಲಕ ನೀಡಲಾಗುವುದು.
Back to top button
error: Content is protected !!