ಪ್ರಕಟಣೆ

ಯುವಕರು ಅರೆ ಸೇನಾಪಡೆ ಸೇರಲು ಒಕ್ಕೂಟ ಒತ್ತಾಯ

ಕುಶಾಲನಗರ, ನ 10: ಮುಂಬರುವ 2026 ಹಾಗೂ 2027 ರ ಸಾಲಿನಲ್ಲಿ 3500 ಅಭ್ಯರ್ಥಿಗಳನ್ನು ಸೇನೆಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದ್ದು ಈ ಬಗ್ಗೆ ಕೊಡಗಿನ ಯುವಕರು ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಕೊಡಗು ಜಿಲ್ಲೆಯ ಅರೆ ಸೇನಾಪಡೆ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಒಕ್ಕೂಟದ ಅಧ್ಯಕ್ಷ ಎಂ.ಜಿ.ಯತೀಶ್, ನಿರ್ದೇಶಕ ಜಿ.ಕೆ.ದಿನೇಶ್ ಕುಮಾರ್
ಸಂಚಾಲಕ ನೂರೇರ ಭೀಮಯ್ಯ ಅವರುಗಳು,
ಸೇನಾ ವಿಭಾಗದ ಅಸ್ಸಾಂ ರೈಫಲ್, ಬಿಎಸ್ ಎಫ್, ಸಿಆರ್ ಪಿ ಎಫ್, ಸಿ ಐ ಎಸ್ ಎಫ್, ಐಟಿಬಿಪಿ ಹಾಗೂ ಎಸ್ ಎಸ್ ಬಿ ಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಯುವಕರು ಈಗಿನಿಂದಲೇ ತಯಾರಿ ನಡೆಸಿಕೊಳ್ಳಬೇಕು ಎಂದು ಕೋರಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಅರೆ ಸೇನಾಪಡೆಯಲ್ಲಿ ಸೇವೆ ಮಾಡಿ ನಿವೃತ್ತರಾದವರು ಹಾಗೂ ಹಾಲೀ ಸೇವೆಯಲ್ಲಿರುವ ಯೋಧರು ಸುಮಾರು ನಾಲ್ಕು ಸಾವಿರ ಸಂಖ್ಯೆಗೂ ಹೆಚ್ಚಿದ್ದಾರೆ.
ಕಳೆದ 13 ವರ್ಷಗಳ ಹಿಂದೆ ಮಡಿಕೇರಿ ಮಹದೇವಪೆಟೆಯಲ್ಲಿ ಅರೆಸೇನಾಪಡೆಯ. ನಿವೃತ್ತ ಯೋಧರ ಸಂಘದ ಕಛೇರಿ ಬಾಡಿಗೆ ಕಟ್ಟಡ ದಲ್ಲಿ ಆರಂಭಿಸಲಾಗಿದೆ.
ಸೇನೆ ಸೇರಬಯಸುವ ಯುವಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗೆ ಒಕ್ಕೂಟದ ಅಧ್ಯಕ್ಷರಾದ ಎಂ.ಜಿ.ಯತೀಶ್ 9448475156
ನಿರ್ದೇಶಕರಾದ ಜಿ.ಕೆ.ದಿನೇಶ್ ಕುಮಾರ್ 9741201717, ಸಂಚಾಲಕರಾದ ನೂರೇರಾ ಭೀಮಯ್ಯ 9481057868
ಇವರನ್ನು ಸಂಪರ್ಕಿಸುವಂತೆ ದಿನೇಶ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!