ಪ್ರಕಟಣೆ

Paperless Registraton ಕಾವೇರಿ 2.0 ಕಾಗದ ರಹಿತ ದಸ್ತಾವೇಜು ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಬಗ್ಗೆ ತರಬೇತಿ

ಕುಶಾಲನಗರ, ಜ 30: ಕರ್ನಾಟಕ ಸರ್ಕಾರವು ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಕಾವೇರಿ 2.0 ಕಾಗದ ರಹಿತ ದಸ್ತಾವೇಜು (Paperless Registraton) ಅಪ್ಲಿಕೇಶನ್ ಒಂದನ್ನು ಪರಿಚಯಿಸಿರುತ್ತಾರೆ. ಪಾರದರ್ಶಕತೆ, ಅನುಕೂಲತೆ ಹಾಗೂ ದಕ್ಷತೆಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಹೊಸದಾಗಿ ಪರಿಚಯಿಸಲಾದ Paperless Registraton ಕಾವೇರಿ 2.0 ಕಾಗದ ರಹಿತ ದಸ್ತಾವೇಜು ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವ ಬಗ್ಗೆ ದಿನಾಂಕ 02/02/2026 ರಂದು ಮಧ್ಯಾಹ್ನ 12 ಗಂಟೆಗೆ ಕುಶಾಲನಗರದ ಉಪ ನೋಂದಣಿ ಕಚೇರಿ, ಪಟೇಲ್ ಕಾಂಪ್ಲೆಕ್ಸ್ ನಲ್ಲಿ ಮೊದಲನೇ ಹಂತದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಈ ಮೂಲಕ ತಿಳಿಯಪಡಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!