ಕುಶಾಲನಗರ, ಜೂ. 15: ಕುಶಾಲನಗರದ ರಥ ಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ವಾರ್ಷಿಕ ಜಯಂತಿ ಉತ್ಸವವು 19 ರಂದು ನಡೆಯಲಿದೆ.
ಇದರ ಅಂಗವಾಗಿ ಬೆಳಿಗ್ಗೆ 5 ಗಂಟೆಗೆ ಗಣಪತಿ ಹೋಮ, ಧ್ವಜಾರೋಹಣ, ನಂತರ ಕಾವೇರಿ ನದಿಯಿಂದ ಕಳಸ ಹೊತ್ತು ಮುಖ್ಯ ಬೀದಿಗಳಲ್ಲಿ ಜಾನಪದ ವೀರಗಾಸೆ, ನೃತ್ಯ ಮತ್ತು ಮಂಗಳ ವಾದ್ಯದೊಂದಿಗೆ ಮೂಲಕ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನ ತಲುಪುವುದು, ನಂತರ ದೇವಿಗೆ ಪೂಜಾ ವಿಧಿಗಳು ಹಾಗೂ ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಾಂಗ ಸಂಘದ ಅಧ್ಯಕ್ಷ ಡಿ.ವಿ. ರಾಕೇಶ್ ತಿಳಿಸಿದ್ದಾರೆ.
ಸಂಜೆ 6 ಗಂಟೆಗೆ ವಿದ್ಯುತ್ ಅಲಂಕೃತವಾದ ಭವ್ಯ ಮಂಟಪದಲ್ಲಿ ದೇವಿಯ ವಿಗ್ರಹವನ್ನು ಕುಳ್ಳಿರಿಸಿ, ವಿಶೇಷ ಪೂಜೆ, ದೀಪಾಲಂಕಾರದೊಂದಿಗೆ ವೀರಗಾಸೆ ನೃತ್ಯ, ಮತ್ತು ಮಂಗಳವಾಧ್ಯದೊಂದಿಗೆ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ನಗರ ಪ್ರಮುಖ ಬೀದಿಗಳಲ್ಲಿ ಸಾಗಲಿದೆ ಎಂದು ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿಯ ಪ್ರಕಟಣೆ ತಿಳಿಸಿದೆ.
Back to top button
error: Content is protected !!