ಟ್ರೆಂಡಿಂಗ್

ಹೊಸ ಹಟ್ಟಿಯಲೊಂದು ಸಾಹಿತ್ಯ ಸಂಭ್ರಮ

ಕುಶಾಲನಗರ, ಮೇ 22: ಕವಿಹೃದಯಗಳು, ಸಾಹಿತಿಗಳು ಕನ್ನಡಾಭಿಮಾನಿಗಳು ಜೊತೆಗೆ ಒಂದಿಷ್ಟು ಗಾಯಕರು ಒಟ್ಟಿಗೆ ಯಾವುದಾದರೊಂದು ಸಂದರ್ಭದಲ್ಲಿ ಒಟ್ಟಿಗೆ ಸೇರಿದರೆಂದರೆ ಅಲ್ಲೊಂದು ಸಾಹಿತ್ಯ ಸಂಭ್ರಮ ನಡೆಯುತ್ತದೆ, ಇದಕ್ಕೆ ಉದಾಹರಣೆಯಂತೆ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಇತ್ತೀಚೆಗೆ ವಿರಾಜಪೇಟೆಯಲ್ಲಿ ಕವಿ ವೈಲೇಶ್ ಮಗಳ ಮದುವೆ ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಗೀತಗಾಯನ ಜೊತೆಗೆ ಎರಡು ಪುಸ್ತಕಗಳನ್ನು ವಧು ವರರು ಬಿಡುಗಡೆಗೆಗೊಳಿದ್ದರು.

ಇದರಂತೆ ಮೇ 20 ರಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಸಾಗರ್ ರವರ ಹೊಸಹಟ್ಟಿ ಸೇರುವ ಸಂದರ್ಭದಲ್ಲಿ (ಗೃಹಪ್ರವೇಶ) ಅನೇಕ ಕವಿಗಳು ಸಾಹಿತಿಗಳು ಜೊತೆಗೆ ಗಾಯಕರೆ ಹೆಚ್ಚಾಗಿ ಆಗಮಿಸಿದ್ದು ಅವರ ಹೊಸ ಹಟ್ಟಿಯಲ್ಲಿ ಸಾಹಿತಿ ಹಾಗು ಮಡಿಕೇರಿ ತಾಲೂಕಿನ ಸಮ್ಮೇಳನದ ಅಧ್ಯಕ್ಷರಾಗಿದ್ದ  ಶೋಭಸುಬ್ಬಯರವರ ‘ರಾಮಕೃಷ್ಣ ಅಮೃತ ಸಿಂಚನ’ ಎಂಬ ಪುಸ್ತಕವನ್ನು ನಿವೃತ್ತ ಹಿರಿಯ ಶಿಕ್ಷಣ ತಜ್ಞ ನಜೀರ್ ಅಹಮದ್ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಕವಿಗಳು ಸಾಹಿತಿಗಳು ತಮ್ಮ ಬರವಣಿಗೆಯ ಮುಖಾಂತರ ಉತ್ತಮ ಸಂದೇಶ ನೀಡುವುದು ಅನಿವಾರ್ಯವಾಗಿದೆ. ಕಾರ್ಯಕ್ರಮ ಏನೇ ಇರಲಿ, ಅಲ್ಲಿ ಸಾಹಿತಿಗಳು ಗಾಯಕರು ಇದ್ದರೆ ಆ ಕಾರ್ಯಕ್ರಮದ ಮೌಲ್ಯ ಹೆಚ್ಚುತ್ತದೆ ಎಂದರು.

ಗೀತಾ ಗಾಯನದಲ್ಲಿ ಅನಂತಶಯನ  ಕಬ್ಬಚೀರ ರಶ್ಮಿ ಪಾಲ್ಗೊಂಡಿದ್ದರು‌.

ಶಾಸಕ ಡಾ. ಮಂತರ್ ಗೌಡ, ಕ ಸಾ ಪ ದ ಮಾಜಿ ಅಧ್ಯಕ್ಷ ಟಿ ಪಿ ರಮೇಶ್, ಮುನೀರ್ ಅಹಮದ್, ಸಂಪತ್ ಕುಮಾರ್ನಾ, ಗೇಶ್ ಕಾಲೂರ್, ಭಾರದ್ವಾಜ್, ಜಲಕಾಳಪ್ಪ ಕಿಗ್ಗಾಲು ಗಿರೀಶ್, ವೈಲೇಶ್ ಸೇರಿದಂತೆ ನೂರಾರು ಸಾಹಿತಿಗಳು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!