ಅರಣ್ಯ ವನ್ಯಜೀವಿ

ಕಾಡುಕೋಣ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಕುಶಾಲನಗರ, ಏ 12:  ಕುಶಾಲನಗರ ವಲಯ ವ್ಯಾಪ್ತಿಯ, ಮಾಲ್ದಾರೆ ಶಾಖೆಯ ಮಾಲ್ದಾರೆ ಗಸ್ತಿನ ಪಿರಿಯಾಪಟ್ಟಣ ಸಿದ್ಧಾಪುರ ರಸ್ತೆಯ ಅಂಚಿನಲ್ಲಿ ಒಂದು ಕಾಡುಕೋಣ (ಕಾಟಿ) ವನ್ನು ಗುಂಡಿಕ್ಕಿ ಕೊಂದು ಮಾಂಸವನ್ನಾಗಿ ಕತ್ತರಿಸಿಕೊಂಡು ಸಾಗಿಸಿದ್ದು ಕೃತ್ಯವೆಸಗಿದ ಆರೋಪಿಗಳು ಪರಾರಿಯಾದ ಸಂಬಂಧ ಪ್ರಕರಣವನ್ನು WLOR No: 05/2023-24, ದಿನಾಂಕ: 14/03/2024 ದಾಖಲಿಸಲಾಗಿದೆ. ದಿನಾಂಕ 24/03/2024 ರಂದು ಆನೆಚೌಕೂರು ವನ್ಯಜೀವಿ ವಲಯದಲ್ಲಿ ಪಿರಿಯಾಪಟ್ಟಣ-ಸಿದ್ದಾಪುರ ಮುಖ್ಯ ರಸ್ತೆಯಲ್ಲಿ ಕಾಡು ಕೋಣವನ್ನು ಹತ್ಯೆ ಮಾಡಿ ಮಾಂಸ ಮಾಡಿ ಸಾಗಿಸಿದ ಸಂಬಂಧ ಪ್ರಕರಣ ದಾಖಲಾಗಿರುತ್ತದೆ. ಸದರಿ ಎರಡೂ ಪ್ರಕರಣಗಳಲಿ, ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಲು  ಭಾಸ್ಕರ್. ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಮಡಿಕೇರಿ ವಿಭಾಗ, ಮಡಿಕೇರಿ ರವರ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾಗಿ ದಿನಾಂಕ 11/04/2024 ರಂದು ಖಚಿತ ಮಾಹಿತಿಯ ಮೇರೆಗೆ 1) ಮಹಮ್ಮದ್ ಜಾಬೀರ್, ಪ್ರಾಯ 29 ವರ್ಷಗಳು, ತಂದೆ ಮೊಯಿದು, ಕುಂಜಿಲ ಗ್ರಾಮ, ಕಕ್ಕಬೆ ಅಂಚೆ, ನಾಪೋಕು ಹೋಬಳಿ, ಮಡಿಕೇರಿ ತಾಲೂಕು ಮತ್ತು 2) ನೌಫಲ್. ಪ್ರಾಯ 24 ವರ್ಷಗಳು, ತಂದೆ ಹಮೀದ್, ಕುಂಜಿಲ ಗ್ರಾಮ, ಕಕ್ಕಬೆ ಅಂಚೆ, ನಾಪೋಕು ಹೋಬಳಿ, ಮಡಿಕೇರಿ ತಾಲೂಕು ರವರನ್ನು ಬಂದಿಸುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಯಶಸ್ವಿಯಾಗಿರುತ್ತಾರೆ. ಆರೋಪಿಗಳನ್ನು ಬಂಧಿಸಿ ವಿರಾಜಪೇಟೆ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಉಳಿದ 6 ಜನ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ತನಿಖೆ ನಡೆಯುತ್ತಿರುವುದಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ಒಂದು ಮಾರುತಿ ಒಮಿನಿ ಕಾರು, 2 ಮೊಬೈಲ್ ಫೋನ್ ಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!