ಕಾರ್ಯಕ್ರಮ

ಸರಸ್ವತಿ ಶಿಕ್ಷಕರ ತರಬೇತಿ ಕೇಂದ್ರ 1994 ನೇ ಸಾಲಿನ ಪ್ರಶಿಕ್ಷಣಾರ್ಥಿಗಳಿಂದ ಗುರುವಂದನ

ಕುಶಾಲನಗರ, ಅ 09: ಮಡಿಕೇರಿ ಸರಸ್ವತಿ ಶಿಕ್ಷಕರ ತರಬೇತಿ ಕೇಂದ್ರದ 1994 ನೇ ಸಾಲಿನ ಪ್ರಶಿಕ್ಷಣಾರ್ಥಿಗಳಿಂದ ಗುರುವಂದನ ಸಮಾರಂಭವನ್ನು ಭಾನುವಾರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಯಡವನಾಡು . ಸೋಮವಾರಪೇಟೆ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಂಸ್ಥೆಯ ಪ್ರಾಂಶುಪಾಲರಾಗಿದ್ದ ಬೆಳ್ಳಿಯಪ್ಪ ನವರು ಅಧ್ಯಕ್ಷತೆ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾಗಿದ್ದ ಪುಳಕೊಂಡ ಮುತ್ತಪ್ಪ ರವರ ಪುತ್ರ ಸಂದೀಪ್ ಮುತ್ತಪ್ಪ ರವರ ಕುಟುಂಬ ಹಾಗೂ ಉಪಾಧ್ಯಾಯರು ಗಳಾಗಿದ್ದ ಸರೋಜಿನಿ ಶೆಟ್ಟಿ ಹಾಗೂ  ಮೀನಾಕ್ಷಿ ರವರು ಭಾಗವಹಿಸಿ ಗುರುವಂದನೆಯನ್ನು ಸ್ವೀಕರಿಸಿದರು.  ಕಾಂತಿ ಹಾಗೂ ಕವಿತಾ ರೈ ಉಪಾಧ್ಯಾಯರುಗಳನ್ನು ಅವರ ಅನುಪಸ್ಥಿತಿಯಲ್ಲಿ ಸ್ಮರಿಸಲಾಯಿತು. ಅಗಲಿರುವ ಶಿಕ್ಷಕರಿಗೂ ಸಂತಾಪ ಸೂಚಿಸಲಾಯಿತು.

ಕಾರ್ಯಕ್ರಮದಲ್ಲಿ ವನಜ ಶಿಕ್ಷಕಿಯವರು ಎಲ್ಲರನ್ನು ಸ್ವಾಗತಿಸಿದರು . ವೇದಿಕೆಯಲ್ಲಿನ ಗಣ್ಯರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಶಿಕ್ಷಕ ಟಿ.ಆರ್ ರಮೇಶ್  ಮಾತನಾಡಿದರು.

ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿದಂತಹ ಗುರು ವೃಂದದವರು ಮಾತನಾಡಿ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಪರಿಸರ ಕಾಳಜಿ ,ಪ್ರಾಮಾಣಿಕತೆ, ಸತ್ಯ ಸಂದತೆ, ಸಂಸ್ಕಾರಗಳನ್ನು ಮೈಗುಡಿಸಿಕೊಳ್ಳುವಂತೆ ,ಮಕ್ಕಳು ಕ್ರಿಯಾಶೀಲರಾಗಿ ಸಾಮಾಜಿಕ ಪರಿಸ್ಥಿತಿಗಳನ್ನು ಎದುರಿಸಿ ಸಕಾರಾತ್ಮಕ ಆಲೋಚನೆಗಳನ್ನು ಮಾಡುವಂತೆ ಹಾಗೂ ಜೀವನದಲ್ಲಿ ಸರಿಯಾದ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಲು ಮಾರ್ಗದರ್ಶನ ನೀಡಿ ಎಂಬ ಕಿವಿ ಮಾತುಗಳನ್ನು ಶಿಕ್ಷಕರಿಗೆ ಹೇಳಿದರು.

ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕ ಸ್ನೇಹಿತರನ್ನು ಗೌರವಿಸಲಾಯಿತು. ಮೃತರಾದ ಶಿಕ್ಷಕರ ಸ್ನೇಹಿತ ಕುಟುಂಬದ ಸದಸ್ಯಗಳನ್ನು ಕರೆದು ಗೌರವಿಸಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಆತ್ಮದೈರ್ಯವನ್ನು ನೀಡಲಾಯಿತು.

ಇದೇ ಸಮಯದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಹಾಗೂ ಸೋಮವಾರಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜು ಅವರನ್ನು ಸನ್ಮಾನಿಸಲಾಯಿತು.ಶಿಕ್ಷಕರುಗಳಲ್ಲಿ ಅನುಭವ ಹಂಚಿಕೊಂಡಂತಹ ದೇವರಾಜ್.ಪಿ.ವಿ ಮತ್ತು ಸುಬ್ರಹ್ಮಣ್ಯ ಟಿ.ಎನ್, ಈ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದುಕೊಂಡು ಏನೆಲ್ಲಾ ಸಾಧಿಸಲು ಸಾಧ್ಯವಾಗಿದೆ ಎಂಬುದನ್ನು ತಿಳಿಸಿ ಗುರುಗಳ ಮಾರ್ಗದರ್ಶನವನ್ನು ಸ್ಮರಿಸಿದರು.

ಅಧ್ಯಕ್ಷತೆಯ ಭಾಷಣದಲ್ಲಿ ಬೆಳ್ಳಿಯಪ್ಪ ಪ್ರಾಂಶುಪಾಲರು ಮಾತನಾಡುತ್ತ ಈ ರೀತಿಯ ಗುರುವಂದನೆ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಇದೆ ಮೊದಲನೆಯದಾಗಿದ್ದು ಬಹಳ ಸಂತೋಷವಾಗಿದೆ ಅಲ್ಲದೆ ಇಲ್ಲಿ ಶಿಕ್ಷಕರ ತರಬೇತಿ ಪಡೆದು ಈಗ ಶಿಕ್ಷಕರಾಗಿ ಮಾಡಿರುವ ಸಾಧನೆಗಳನ್ನು ಕೇಳಿ ನಮಗೆ ಹೆಮ್ಮೆ ಎನಿಸುತ್ತಿದೆ. ಈ ಕಾರ್ಯ ಹೀಗೆ ಮುಂದುವರೆಯಲಿ ಎಂದು ಎಲ್ಲಾ ಶಿಕ್ಷಕರನ್ನು ಹರಸಿದರು.

 ಮಂಜುನಾಥ್ ( ಆರ್ಟ್ಸ್) ಶಿಕ್ಷಕರು ವಂದನಾರ್ಪಣೆ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಮಹೇಶ್ BR. ರವರು ನಡೆಸಿಕೊಟ್ಟರು . 29 ವರ್ಷಗಳ ನಂತರ ಎಲ್ಲರನ್ನು ಒಟ್ಟುಗೂಡಿಸಿ ದಂತಹ ಶಿಕ್ಷಕರುಗಳಿಗೆ ವಂದನೆಗಳನ್ನು ಹೇಳುವ ಮುಖಾಂತರ ಎಲ್ಲ ಶಿಕ್ಷಕ ಸಹಪಾಠಿಗಳು ನೂರೊಂದು ನೆನಪುಗಳ ಸಮ್ಮಿಲನದೊಂದಿಗೆ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!