ಕುಶಾಲನಗರ, ಜ 30:ಆಲ್ ಇಂಡಿಯಾ ಹೇರ್ ಅಂಡ್ ಬ್ಯೂಟಿ ಅಸೋಸಿಯೇಷನ್ ಆಶ್ರಯದಲ್ಲಿ ಹೈಡ್ರಾ ಫೇಷಿಯಲ್ ಸಂಬಂಧಿಸಿದಂತೆ ಕಾರ್ಯಗಾರ ಕೂರ್ಗ್ ಚಾಪ್ಟರ್ ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯ ವಿವಿಧೆಡೆಗಳಿಂದ ಪಾಲ್ಗೊಂಡಿದ್ದ ಬ್ಯೂಟಿ ಪಾರ್ಲರ್ ಮಾಲೀಕರುಗಳಿಗೆ ಅಸೋಸಿಯೇಷನ್ ಮೂಲಕ ಹೈಡ್ರಾ ಫೇಷಿಯಲ್ ಮಾಡುವ ವಿಧಾನಗಳು, ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಪ್ರಾತ್ಯಕ್ಷಿಕೆಯೊಂದಿಗೆ ಅಗತ್ಯ ಮಾಹಿತಿ ಒದಗಿಸಿದರು.
ಐಬಾ ಕರ್ನಾಟಕ ತಂಡದ ಅಧ್ಯಕ್ಷೆ ಗಂಗಾ ಶ್ರೀಧರ್, ಉಪಾಧ್ಯಕ್ಷ ಪಟ್ಟಾಭಿರಾಮನ್, ಪ್ರಧಾನ ಕಾರ್ಯದರ್ಶಿ ಭವಾನಿ ಶ್ರೀಧರ್, ಖಜಾಂಚಿ ವೀಣಾ, ಜಂಟಿ ಕಾರ್ಯದರ್ಶಿ ಸುನಿತ, ಕಾರ್ಯನಿರ್ವಾಹಕ ನಿರ್ದೇಶಕರಾದ ಜ್ಯೋತಿ ಅಯ್ಯಪ್ಪ, ಶ್ರೀಕಾಂತಿ ರೆಡ್ಡಿ, ಕಾರ್ಯಕ್ರಮ ಸಂಯೋಜಕ ಕುಶಾಲನಗರ ಲುಕ್ಸ್ಬ್ಯೂಟಿ ಕೇರ್ ಮಾಲೀಕ ಆರ್.ಲೋಕೇಶ್ ಇದ್ದರು.
Back to top button
error: Content is protected !!