ಪ್ರಕಟಣೆ

ಅ.8 ರಂದು ಭಾನುವಾರ ಕುಶಾಲನಗರ ಗೌಡ ಸಮಾಜದ ವಾರ್ಷಿಕ ಮಹಾಸಭೆ

ಕುಶಾಲನಗರ, ಅ 04: ಕುಶಾಲನಗರ ಗೌಡ ಸಮಾಜದ ವಾರ್ಷಿಕ ಮಹಾಸಭೆ ಅ.8 (ಭಾನುವಾರ) ಸಮಾಜದ ಆವರಣದಲ್ಲಿ ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ತಿಳಿಸಿದರು.
ಸಂಘದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರದ ಗೌಡ ಸಮಾಜದ ವತಿಯಿಂದ ಬಸವನಹಳ್ಳಿಯಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಿಸಲು ತಯಾರಿ ನಡೆಸಿರುವುದಾಗಿ
ಈ ಕಲ್ಯಾಣ ಮಂಟಪ ಆಧುನಿಕ ಶೈಲಿಯಲ್ಲಿ ಉತ್ತಮ ಮತ್ತು ಮಾದರಿಯಾಗಿ ನಿರ್ಮಾಣ ಮಾಡಲಾಗುವುದು. ಇಲ್ಲಿ ನಿವೇಶನ ಖರೀದಿಸಲು ಸಮಾಜ ಬಾಂಧವರಿಂದ ದೇಣಿಗೆ ರೂಪದಲ್ಲಿ ಹಣ ಪಡೆಯಲಾಗಿದೆ. ಕೆಲವರು ಬಡ್ಡಿ ರಹಿತವಾಗಿಯೂ ಸಾಲ ಕೊಟ್ಟಿದ್ದಾರೆ. ಎಲ್ಲರ ಸಹಕಾರದಿಂದ ಕೇವಲ 2 ತಿಂಗಳಲ್ಲೇ ಜಾಗದ ನೋಂದಣಿ ಕಾರ್ಯ ಮುಗಿದಿದೆ.
ಗೌಡ ಸಮಾಜದಲ್ಲಿ ಹಾಲಿ ಸುಸಜ್ಜಿತ ಮುಖ್ಯ ಹಾಲ್, ಊಟದ ಹಾಲ್, ಸಸ್ಯಹಾರಿ ಊಟದ ಹಾಲ್, ಅಡುಗೆ ಕೋಣೆ, ಎಲ್ಲಾ ರೀತಿಯ ಪಾತ್ರಗಳು ಇವೆ. ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಹಾಲ್ ನೀಡಲಾಗುತ್ತಿದೆ. ಸಂಘದ ಸದಸ್ಯರು ಮೃತರಾದರೆ ಅವರ ತಿಥಿ ಕರ್ಮಾಂತರಕ್ಕೆ ಉಚಿತವಾಗಿ ಹಾಲ್ ಒದಗಿಸಲಾಗುತ್ತಿದೆ. ಕುಶಾಲನಗರ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೌಡ ಸಮುದಾಯದವರು ವಾಸವಾಗಿದ್ದು, ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಸಿಲಿಕಾನ್ ಚೇಂಬರ್ ಹೊಂದಿರುವ ಸ್ಮಶಾನವೂ ಇದೆ.
ಗೌಡ ಸಮಾಜದ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯುವ ಸಂದರ್ಭ ಸಾರ್ವಜನಿಕರಿಗೆ ಕಿರಿ ಕಿರಿ ಆಗದಂತೆ ವಾಹನ ನಿಲುಗಡೆ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಪುರಸಭೆಗೆ ಹೊರೆ ಆಗದಂತೆ ವಿಲೇವಾರಿ ಮಾಡಲಾಗುತ್ತಿದೆ. ಸಮಾಜದ ವತಿಯಿಂದ ಹಲವು ಸಾಮಾಜಿಕ ಕಾರ್ಯಗಳನ್ನು ನಡೆಸಲಾಗುತ್ತಿದ್ದು ಕಳೆದ ವರ್ಷ ಕಾವೇರಿ ತುಲಾಸಂಕ್ರಮಣದ ನಂತರದ ದಿನ ಕುಶಾಲನಗರದಿಂದ ಭಾಗಮಂಡಲ ತನಕ ರಸ್ತೆಯ ಎರಡೂ ಬದಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಕಾವೇರಿ ತೀರ್ಥೋದ್ಭವದ ನಂತರ ಕುದುಪಜೆ ಕುಟುಂಬಸ್ಥರಿಂದ ಕುಶಾಲನಗರದಲ್ಲಿ ಪವಿತ್ರ ಕಾವೇರಿ ತೀರ್ಥ ವಿತರಣೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಯದರ್ಶಿ ಆಲಗುಂಜ ಕೃಷ್ಣಮೂರ್ತಿ ಮಾತನಾಡಿ, 41 ವರ್ಷಗಳ ಹಿಂದೆ ಸ್ಥಾಪನೆಯಾದ ಸಮಾಜದಲ್ಲಿ ಪ್ರಸ್ತುತ 1382 ಮಂದಿ ಸದಸ್ಯರು ಇದ್ದಾರೆ. ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸಹಕಾರ್ಯದರ್ಶಿ ಹಾಗೂ ಖಜಾಂಚಿ ಸೇರಿ 17 ಮಂದಿಯ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಗೋಷ್ಠಿಯಲ್ಲಿ ಸಮಾಜದ
ಉಪಾಧ್ಯಕ್ಷ ಸೆಟ್ಟೆಜನ ಗಣಪತಿ, ಕುಲ್ಲಚೆಟ್ಟಿ ಕಾಶಿ ಪೂವಯ್ಯ, ಸಹಕಾರ್ಯದರ್ಶಿ ಸುಳ್ಯಕೋಡಿ ಮಾದಪ್ಪ, ಖಜಾಂಚಿ ಬಳ್ಳಡ್ಕ ವಿಜಯಕುಮಾರ್ ಹಾಗೂ ನಿರ್ದೇಶಕರು, ಗೌಡ ಯುವಕ ಸಂಘ
ಪದ್ಮಾವತಿ ಮಹಿಳಾ ಒಕ್ಕೂಟ, ಗೌಡ ಮಹಿಳಾ ಸ್ವಸಹಾಯ ಸಂಘ, ಗೌಡ ಮಾಜಿ ಸೈನಿಕರ ಸಂಘ
ಹಾಗೂ ಗೌಡ ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!