ಕುಶಾಲನಗರ, ಜ 09:
ಕುಶಾಲನಗರದ ನಂ.19722ನೇ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ ಸಾಲಿನ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದೆ.
2024-29 ನೇ ಸಾಲಿನ 5 ವರ್ಷಗಳ ಅವಧಿಗೆ 15 ಮಂದಿ ಆಡಳಿಯ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಜ.18 ರಂದು ಮತದಾನ ನಡೆಯಲಿದೆ.
ಆಕಾಂಕ್ಷಿಗಳು ಈಗಾಗಲೆ ನಾಮ ಪತ್ರ ಸಲ್ಲಿಕೆ ಕಾರ್ಯ ಆರಂಭಿಸಿದ್ದಾರೆ.
ಬಿಜೆಪಿ ಪಕ್ಷ ಪ್ರತಿನಿಧಿಸುವ ಪ್ರಮುಖರ ತಂಡ ಮಂಗಳವಾರ ನಾಮಪತ್ರ ಸಲ್ಲಿಸಿದರು.
ಪುರಸಭೆ ಸದಸ್ಯ ಬಿ.ಎಲ್.ಜಗದೀಶ್ (ಪ.ಪಂಗಡ),
ಕೂಡುಮಂಗಳೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರವೀಣ್ (ಸಾಮಾನ್ಯ), ಗ್ರಾಪಂ ಮಾಜಿ ಅಧ್ಯಕ್ಷೆ ಇಂದಿರಾ ರಮೇಶ್ (ಮಹಿಳಾ ಮೀಸಲು), ಯುವ ಮೋರ್ಚಾ ಪ್ರಮುಖ ರಜನಿಕಾಂತ್ (ಸಾಮಾನ್ಯ)
,ಪ್ರವಾಸೋದ್ಯಮಿ ಪೃಥ್ವಿ (ಬಿಸಿಎಂ ಎ), ರಾಮು (ಎಸ್.ಸಿ.)
ಮತ್ತಿತರರು ನಾಮಪತ್ರ ಸಲ್ಲಿಸಿದರು.
ಈ ಸಂದರ್ಭ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ವಕ್ತಾರ ಕೆ.ಜಿ.ಮನು, ಪ್ರಮುಖರಾದ ಮಂಜುನಾಥ್, ಮಣಿಕಂಠ, ಸುಮನ್ ಮತ್ತಿತರರು ಇದ್ದರು.
Back to top button
error: Content is protected !!