ಪ್ರಕಟಣೆ

ಕೊಡಗು ಶ್ವಾನ ದಳದ ಲಿಯೊ ಕೊನೆ ಉಸಿರು

ಕುಶಾಲನಗರ, ಡಿ 21: ಕೊಡಗು ಪೊಲೀಸ್ ಇಲಾಖೆಯಲ್ಲಿ 11 ವರ್ಷ ಸೇವೆ ಸಲ್ಲಿಸಿದ್ದ ಗಂಡು ಶ್ವಾನ ಲಿಯೋ‌ ಮೃತಪಟ್ಟಿದೆ. ಕೆಲದಿನಗಳಿಂದ ಅನಾರೋಗ್ಯ ಪೀಡಿತವಾಗಿದ್ದ ಲಿಯೊ, 380 ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಭೂ ಕುಸಿತ ಸಂದರ್ಭ ನಾಲ್ಕು ಮೃತ ದೇಹ ಪತ್ತೆ ಹಚ್ಚಿದ್ದ ಲಿಯೊ ಕರ್ತವ್ಯ ಪರತೆಗೆ ಐದು ಪದಕ ಪಡೆದಿದ್ದ. ಶ್ವಾನದಳ ಸಿಬ್ಬಂದಿ ಮನಮೋಹನ್ ಗರಡಿಯಲ್ಲಿ ಪಳಗಿದ್ದ ಲಿಯೊ ಅಗಲಿಕೆಗೆ ಪೊಲೀಸ್ ಸಿಬ್ಬಂದಿಗಳು ಕಂಬನಿ ಮಿಡಿದಿದ್ದಾರೆ. ಮಡಿಕೇರಿ ಡಿಆರ್ ಪೊಲೀಸ್ ಆವರಣದಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!