ಕುಶಾಲನಗರ, ಅ 14: ಕುಶಾಲನಗರದ ಕಾವೇರಿ ತೀರ್ಥ ವಿತರಣೆ ಸಮಿತಿ ವತಿಯಿಂದ ಅ.18 ರಂದು ಕಾವೇರಿ ತೀರ್ಥ ವಿತರಣೆ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಮುಖ ಕೆ.ಎಸ್.ಶಶಿಕುಮಾರ್ ತಿಳಿಸಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ತಾಲೂಕಿನಾದ್ಯಂತ ದೇವಾಲಯಗಳು, ಮನೆಮನೆಗೆ ಸೇರಿದಂತೆ ಸಾರ್ವಜನಿಕವಾಗಿ ವಾಹನಗಳಲ್ಲಿ ತೀರ್ಥ ಮತ್ತು ಪ್ರಸಾದ ವಿತರಣೆ ನಡೆಸಲು ತೀರ್ಮಾನಿಸಿದ್ದೇವೆ. ಪಕ್ಷಾತೀತವಾಗಿ ಎಲ್ಲರೂ ಈ ಕಾರ್ಯಕ್ಕೆ ಕೈಜೋಡಿಸಿ ತೀರ್ಥ ಪಡೆದುಕೊಳ್ಳಲು ಅವರು ಮನವಿ ಮಾಡಿದರು.
ಪ್ಲಾಸ್ಟಿಕ್ ನಿಷೇದ ಹಿನ್ನಲೆಯಲ್ಲಿ ಪರ್ಯಾಯ ಮಾರ್ಗದಲ್ಲಿ ತೀರ್ಥ ಸಂಗ್ರಹಿಸಿ ಭಕ್ತರಿಗೆ ಹಂಚುವ ಕುರಿತು ಚಿಂತನೆ ಹರಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭ ಸಮಿತಿ ಪ್ರಮುಖರಾದ ಕೆ.ಜಿ.ಮನು, ಶಿವಾಜಿ, ಪ್ರಶಾಂತ್, ಕೃಷ್ಣಪ್ಪ, ಎಸ್.ಎಂ. ರವಿ, ಧರ್ಮ, ಪುನಿತ್ ಇದ್ದರು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9742625449
Back to top button
error: Content is protected !!