ಕುಶಾಲನಗರ, ಅ 08: ಕುಶಾಲನಗರದ ಉದ್ಯಮಿ ಬೈಪಾಸ್ ರಸ್ತೆಯ ನಿವಾಸಿ ಮಂಜುನಾಥ್ ಮೆಡಿಕಲ್ ಮಾಲೀಕ ವಿದ್ಯಾಧರ್ (60) ಭಾನುವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು.
ಮುಂಜಾನೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮೈಸೂರಿಗೆ ಕರೆದೊಯ್ಯುವ ವೇಳೆ ಪಿರಿಯಾಪಟ್ಟಣ ಬಳಿ ಮೃತಪಟ್ಟರು.
ಮೃತರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ನೆರವೇರಲಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
Back to top button
error: Content is protected !!